ರಾಗಿ ಕ್ಲೀನಿಂಗ್ ಯಂತ್ರ, ಮಿನಿ ಟ್ರ್ಯಾಕ್ಟರ್, ಟಿಲ್ಲರ್ ಖರೀದಿಗೆ 90% ವರೆಗೆ ಸಹಾಯಧನ – ಇಂದೇ ಅರ್ಜಿ ಸಲ್ಲಿಸಿ

WhatsApp
Telegram
Facebook
Twitter
LinkedIn

ಕೃಷಿ ಇಲಾಖೆ 2024-25ರ ಅನುದಾನ ಯೋಜನೆಯಡಿಯಲ್ಲಿ ಮಿನಿ ಟ್ರ್ಯಾಕ್ಟರ್, ಟಿಲ್ಲರ್, ವೀಡರ್ ಮತ್ತು ಇತರ ಯಂತ್ರೋಪಕರಣಗಳ ಖರೀದಿಗೆ ರಿಯಾಯಿತಿ ದರದಲ್ಲಿ ಅನುದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣಾ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ವರೆಗೆ ಸಹಾಯಧನವನ್ನು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 90% ವರೆಗೆ ಸಹಾಯಧನವನ್ನು ಒದಗಿಸಲಾಗುವುದು. ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ ಸೌಲಭ್ಯಗಳ ಮೇಲೆ 90% ಸಹಾಯಧನವನ್ನು ಒದಗಿಸಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯುವ ಆಸಕ್ತ ರೈತರು ತಮ್ಮ ಸಮೀಪದ ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಪಡೆದು ಅರ್ಜಿ ಸಲ್ಲಿಸಿ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ಖರೀದಿಸಲು ನೋಂದಣಿ ಮಾಡಿಕೊಳ್ಳಬಹುದು.

ಯಾವೆಲ್ಲ ಯಂತ್ರಗಳನ್ನು ಪಡೆಯಲು ಸಬ್ಸಿಡಿ ದೊರೆಯಲಿದೆ ಗೊತ್ತಾ?ಪ್ಲೋರ್ ಮಿಲ್ಮಿನಿ ರೈಸ್ ಮಿಲ್ರಾಗಿ ಕ್ಲೀನಿಂಗ್ ಯಂತ್ರಚಿಲ್ಲಿಪೌಡರಿಂಗ್ ಯಂತ್ರಮಿನಿ ಟ್ರ್ಯಾಕ್ಟರ್ಪವರ್ ಟಿಲ್ಲರ್ಕಳೆ ಕೊಚ್ಚುವಂತ ಯಂತ್ರಪವರ್ ವೀಡರ್ರೋಟೋವೇಟರ್ಪವರ್ ಸ್ಟ್ರೇಯರ್ಡೀಸೆಲ್ ಪಂಪ್ ಸೆಂಟ್ಮೊಟೋಕರ್ಟಗಳುಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣದ ಯಂತ್ರಈ ಮೇಲ್ಕಂಡ ಯಂತ್ರಗಳನ್ನು ಖರೀದಿಸಲು ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನ ದೊರೆಯಲಿದೆ. ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯಆಧಾರ್ ಕಾರ್ಡ್ಬ್ಯಾಂಕ್ ಪಾಸ್ ಬುಕ್ರೇಷನ್ ಕಾರ್ಡ್ಪೋಟೋಜಮೀನಿನ ಪಹಣಿರೂ.100 ಬಾಂಡ್ ಪೇಪರ್ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂಬುದಾಗಿ ಕೃಷಿ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon