‘ಬಿಗ್ ಬಾಸ್ 16’ ಸ್ಪರ್ಧಿ ಮತ್ತು ನೃತ್ಯಗಾರ್ತಿ ಗೋರಿ ನಾಗೋರಿ ಅವರು ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನದ ಚುನಾವಣೆಗೆ ಮುಂಚಿತವಾಗಿ ಜೈಪುರದಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸೇರಿದ್ದಾರೆ. ತಮ್ಮ ರಾಜಕೀಯ ಕ್ಷೇತ್ರದ ಬಗ್ಗೆ ಮಾತನಾಡಿದ ನಾಗೋರ್ ಅವರು, ನಮ್ಮ ಸಮುದಾಯಕ್ಕೆ ಮಾನ್ಯತೆ ಸಿಗಬೇಕು. ಎಎಪಿಯಿಂದ “ಉತ್ತಮ ವೈಬ್ಸ್” ಸಿಕ್ಕಿದೆ. ಎಎಪಿ ಬದಲಾವಣೆಯನ್ನು ತರಬಹುದು ಎಂದು ನಾನು ಭಾವಿಸಿದ್ದೇನೆ. ಎಎಪಿ ದೇಶಕ್ಕೆ ಮುಖ್ಯವಾಗಿದೆ” ಎಂದು ಹೇಳಿದ್ದಾರೆ.


































