ಭಕ್ತಾದಿಗಳು ದೇವರ ಸೇವೆ, ಪ್ರಸಾದ ಮುಂತಾದ ಧಾರ್ಮಿಕ ಆಚರಣೆಗಳ ರಸೀದಿ ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಮುಜರಾಯಿ ಇಲಾಖೆಗೊಳಪಟ್ಟ ದೇವಾಲಯಗಳಲ್ಲಿ ಡಿಜಿಟಲ್ ಕಿಯೋಸ್ಕ್” ಗಳ ಅಳವಡಿಕೆಗೆ ಸರ್ಕಾರ ಚಿಂತನೆ ನಡೆಸಿದೆ.
ಈ ಸೇವೆಯಡಿ ಯಾತ್ರಾರ್ಥಿಗಳು ತಮಗೆ ಬೇಕಾದ ಸೇವಾಚೀಟಿ, ಪ್ರಸಾದ ಮುಂತಾದವುಗಳನ್ನು ತಾವೇ ನಮೂದಿಸಿ, ಯುಪಿಐ ಸೌಲಭ್ಯದಡಿ ಹಣ ಸಂದಾಯ ಮಾಡಿ ಕ್ಷಣಮಾತ್ರದಲ್ಲಿ ರಸೀದಿ ಪಡೆಯಬಹುದು.
ಪ್ರಾಯೋಗಿಕವಾಗಿ ಇದನ್ನು ಬನಶಂಕರಿ ದೇವಾಲಯದಲ್ಲಿ ಅಳವಡಿಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.