ಬಾಂಗ್ಲಾದೇಶ :ಹುಡುಗರ ಗುಂಪೊಂದು ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್ ಮಾಡಿದ್ದು, ವೇಗವಾಗಿ ಬಂದ ರೈಲು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರೀಲ್ಸ್ ಹುಚ್ಚಿಗೆ ಪ್ರಾಣವನ್ನೇ ಕಳೆದುಕೊಂಡ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಹುಡುಗರ ಗುಂಪೊಂದು ರೈಲ್ವೇ ಟ್ರ್ಯಾಕ್ ಬಳಿ ನಿಂತು ಚಲಿಸುತ್ತಿರುವ ರೈಲಿನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ, ರೈಲು ಹತ್ತಿರ ಬರುತ್ತಿದ್ದಂತೆ ಹುಡುಗರು ಫೋನ್ ಹಿಡಿದು ರೆಡಿಯಾಗಿದ್ದಾರೆ. ವೇಗವಾಗಿ ಬಂದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸೇತುವೆಯಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.
@iSoumikSaheb ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಫೇಮಸ್ ಆಗಲು ಹೋಗಿ ಉಸಿರನ್ನೇ ಕಳೆದುಕೊಂಡ ಹಚ್ಚುತನದ ವೀಡೀಯೋಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.