ಎಗ್ ಬೋಂಡಾ ಮಾಡಲು ಬೇಕಾಗುವ ಪದಾರ್ಥ : ಆರು ಬೇಯಿಸಿದ ಮೊಟ್ಟೆ ಅರ್ಧ ಚಮಚ ಮೆಣಸಿನ ಪುಡಿ ಅರ್ಧ ಲೋಟ ಕಡಲೆ ಹಿಟ್ಟು ಕಾಲು ಚಮಚ ಜೀರಿಗೆ ಪುಡಿ ಅರ್ಧ ಲೋಟ ಮೊಸರು ಅರ್ಧ ಲೋಟ ಬಿಸಿ ನೀರು ಕರಿಯಲು ತುಪ್ಪ ರುಚಿಗೆ ತಕ್ಕಷ್ಟು ಉಪ್ಪು ಎಗ್ ಬೋಂಡಾ ಮಾಡುವ ವಿಧಾನ : ಬೇಯಿಸಿದ ಮೊಟ್ಟೆಯನ್ನು ಬಿಡಿಸಿಕೊಂಡು ಮಧ್ಯ ಕತ್ತರಿಸಿಕೊಳ್ಳಿ. ಅದನ್ನು ಬಿಸಿ ಮಾಡಿದ ತುಪ್ಪದಲ್ಲಿ ಅದ್ದಿ ಮುಚ್ಚಿಡಿ. ಇನ್ನೊಂದು ಪಾತ್ರೆಗೆ ಕಡಲೆ ಹಿಟ್ಟು, ಬಿಸಿ ನೀರು, ಮೊಸರು ಸೇರಿಸಿ ಕಲಸಿಕೊಳ್ಳಿ. ಅದಕ್ಕೆ ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪನ್ನು ಹಾಕಿ ಕಲಸಿ. ಬಾಣೆಲೆಗೆ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ನಂತ್ರ ಮೊಟ್ಟೆ ಚೂರನ್ನು ಮೈದಾ ಮಿಶ್ರಣದಲ್ಲಿ ಅದ್ದಿ ಬಾಣಲೆಗೆ ಬಿಡಿ. ಕೆಂಪಗಾಗುವವರೆಗೆ ಕರಿದು ತೆಗೆಯಿರಿ.
