ಬೇಕಾಗುವ ಪದಾರ್ಥಗಳು.
- ಕಡಲೆಕಾಯಿ ಬೀಜ- 1 ಬಟ್ಟಲು
- ಆಲೂಗಡ್ಡೆ- 2 (ಬೇಯಿಸಿದ್ದು)
- ಉಪ್ಪು- ರುಚಿಗೆ ತಕ್ಕಷ್ಟು
- ಹಸಿಮೆಣಸಿನ ಕಾಯಿ- 2
- ಬೆಳ್ಳುಳ್ಳಿ- ಸ್ವಲ್ಪ
- ಜೀರಿಗೆ-ಸ್ವಲ್ಪ
- ಚಿಲ್ಲಿ ಫ್ಲೇಕ್ಸ್- ಸ್ವಲ್ಪ
- ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು
- ಮೊದಲಿಗೆ ಪಾತ್ರೆಯೊಂದಕ್ಕೆ ಕಡಲೆಕಾಯಿ ಬೀಜ, ಸ್ವಲ್ಪ ನೀರು ಹಾಗೂ ಉಪ್ಪು ಹಾಕಿ 5-10 ನಿಮಿಷ ಬೇಯಿಸಿಕೊಳ್ಳಿ.
- ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೇಯಿಸಿದ ಕಡಲೆಕಾಯಿ ಬೀಜ, ಆಲೂಗಡ್ಡೆ, ಉಪ್ಪು, ಜೀರಿಗೆ, ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಹಾಲಿನ ಕವರ್ ನ್ನು ಕೋನ್ ರೀತಿ ಮಾಡಿಕೊಂಡು ಅದರಲ್ಲಿ ಮಿಶ್ರಣ ತುಂಬಿಕೊಳ್ಳಿ.
- ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ ಕೋನ್ ನಲ್ಲಿ ತುಂಬಿದ ಮಿಶ್ರಣವನ್ನು ಕಡಲೆಕಾಯಿ ಬೀಜದ ಗಾತ್ರಕ್ಕೆ ಎಣ್ಣೆಯಲ್ಲಿ ಬಿಟ್ಟು, ಚಿನ್ನದ ಬಣ್ಣ ಬರುವವರೆಗೆ ಕರಿದುಕೊಂಡರೆ ರುಚಿಕರವಾದ ಕಡಲೆಕಾಯಿ ಬೀಜದ ಸ್ನ್ಯಾಕ್ಸ್ ಸವಿಯಲು ಸಿದ್ಧ.