- ಎಲೆಕೋಸು (ಕ್ಯಾಬೇಜ್) – 1
- ಎಣ್ಣೆ – 2 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಕಾಳು ಮೆಣಸಿನ ಪುಡಿ – ಅರ್ಧ ಚಮಚ
- ಬೆಳ್ಳುಳ್ಳಿ ಪುಡಿ – ಕಾಲು ಚಮಚ
- ನಿಂಬೆ ರಸ – 2 ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಮೊದಲಿಗೆ ಓವನ್ ಅನ್ನು 425 ಡಿಗ್ರಿ ಎಫ್ಗೆ ಕಾಯಿಸಿಟ್ಟುಕೊಳ್ಳಿ. ಕ್ಯಾಬೇಜ್ ಚೆನ್ನಾಗಿ ಸ್ವಚ್ಛಗೊಳಿಸಿ, 8 ಭಾಗಗಳಾಗಿ ಕತ್ತರಿಸಿಕೊಳ್ಳಿ.
- ಪ್ಯಾನ್ ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಗ್ರೀಸ್ ಮಾಡಿ. ಕ್ಯಾಬೇಜ್ ತುಂಡುಗಳನ್ನು ಪ್ಯಾನ್ ಮೇಲೆ ಜೋಡಿಸಿ, ಅದಕ್ಕೆ 2 ಟೀಸ್ಪೂನ್ ಎಣ್ಣೆಯನ್ನು ಹಚ್ಚಿ.
- ನಂತರ ಉಪ್ಪು, ಕಾಳು ಪುಡಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಅದರ ಮೇಲೆ ಹಾಕಿ.ಈಗ ಪ್ಯಾನ್ ಅನ್ನು ಓವನ್ನಲ್ಲಿ ಇಟ್ಟು 20 ನಿಮಿಷ ಕಾಯಿಸಿಕೊಳ್ಳಿ.
- ಕ್ಯಾಬೇಜ್ ಮೃದು ಹಾಗೂ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಅದನ್ನು ಓವನ್ನಿಂದ ತೆಗೆಯಿರಿ.
- ಈಗ ಅದರ ಮೇಲೆ ನಿಂಬೆ ರಸವನ್ನು ಚಿಮುಕಿಸಿ, ಹಾಗೂ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕ್ಯಾಬೇಜ್ ರೋಸ್ಟ್ ಸವಿಯಲು ಸಿದ್ಧ.