ಬೇಕಾಗುವ ಪದಾರ್ಥಗಳು…
- ಕಾಳು ಮೆಣಸು- 1 ಚಮಚ
- ಜೀರಿಗೆ- 1 ಚಮಚ
- ಕರಿಬೇವು- ಅರ್ಧ ಹಿಡಿಯಷ್ಟು
- ತುಪ್ಪ- 2 ಚಮಚ
- ಸಾಸಿವೆ- ಸ್ವಲ್ಪ
- ಉದ್ದಿನ ಬೇಳೆ- ಸ್ವಲ್ಪ
- ಕಡಲೆಬೇಳೆ-ಸ್ವಲ್ಪ
- ಕಡಲೆಕಾಯಿ ಬೀಜ-ಸ್ವಲ್ಪ
- ಗೋಡಂಬಿ-ಸ್ವಲ್ಪ
- ಬೆಳ್ಳುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ಇಂಗು- ಸ್ವಲ್ಪ
- ಹಸಿಮೆಣಸಿನ ಕಾಯಿ- 1-2
- ಬ್ಯಾಡಗಿ ಮೆಣಸಿನಕಾಯಿ- 1
- ಈರುಳ್ಳಿ- 1 (ಸಣ್ಣಗೆ ಹೆಚ್ಚಿದ್ದು)
- ಅನ್ನ- ಒಂದು ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ನಿಂಬೆರಸ – ಅರ್ಧ ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
-
ಮಾಡುವ ವಿಧಾನ…
- ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಮೆಣಸು, ಜೀರಿಗೆ ಹಾಗೂ ಕರಿಬೇವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
- ನಂತರ ಮತ್ತೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಕಾದ ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಕಡಲೆಕಾಯಿ ಬೀಜ, ಗೋಡಂಬಿಯನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.
- ನಂತರ ಬೆಳ್ಳುಳ್ಳಿ, ಇಂಗು, ಹಸಿಮೆಣಸಿನ ಕಾಯಿ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಕೆಂಪಗೆ ಮಾಡಿಕೊಳ್ಳಿ. ನಂತರ ಈರುಳ್ಳಿಯನ್ನೂ ಹಾಕಿ ಕೆಂಪಗೆ ಮಾಡಿಕೊಳ್ಳಿ. ಇದೀಗ ಪುಡಿ ಮಾಡಿಕೊಂಡ ಕಾಳುಮೆಣಸಿನ ಮಿಶ್ರಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಅನ್ನ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಪೆಪ್ಪರ್ ರೈಸ್ ಸವಿಯಲು ಸಿದ್ಧ.