ಬೇಕಾಗುವ ಪದಾರ್ಥಗಳು…
- ಮೊಟ್ಟೆ – 4
 - ಈರುಳ್ಳಿ- 1
 - ಕ್ಯಾರೆಟ್-1
 - ಬೀನ್ಸ್- 5
 - ಹಸಿಮೆಣಸಿನಕಾಯಿ- 3
 - ಕ್ಯಾಪ್ಸಿಕಂ- 1/2
 - ಕೊತ್ತಂಬರಿ ಸೊಪ್ಪು-ಸ್ವಲ್ಪ
 - ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ
 - ಅರಿಶಿಣ ಪುಡಿ – 1/2 ಚಮಚ
 - ಕರಿಬೇವಿನ ಸೊಪ್ಪು– ಸ್ವಲ್ಪ
 - ಪೆಪ್ಪರ್‌ಪುಡಿ– ಅರ್ಧ ಚಮಚ
 - ಎಣ್ಣೆ- ಸ್ವಲ್ಪ
 - ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ.
 - ಒಲೆಯ ಮೇಲೆ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಸಣ್ಣಗೆ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್, ಬೀನ್ಸ್ ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಕೊತ್ತಂಬರಿಸೊಪ್ಪು, ಪೆಪ್ಪರ್‌ಪುಡಿ, ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
 - ಇದು ತಣ್ಣಗಾದ ಬಳಿಕ ಮೊಟ್ಟೆಯನ್ನು ಒಡೆದು ಹಾಕಿ. ನಂತರ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 - ಬಳಿಕ ಒಲೆಯ ಮೇಲೆ ಫ್ರೈ ಪ್ಯಾನ್ ಇರಿಸಿ ಎಣ್ಣೆ ಸವರಿ. ಖಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ವೃತ್ತಾಕಾರದಲ್ಲಿ ಹರಡಬೇಕು. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಬದಿಯನ್ನು ಚೆನ್ನಾಗಿ ಬೇಯಿಸಿದ ನಂತರ ಮುಚ್ಚಳ ತೆಗೆದು, ಮಗುಚಿ ಹಾಕಿ ಇನ್ನೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ಇದೀಗ ರುಚಿಕರವಾದ ವೆಜಿಟೇಬಲ್ ಎಗ್ ಆಮ್ಲೆಟ್ ಸವಿಯಲು ಸಿದ್ಧ.
 
 
				
															
                    
                    
                    
































