ಬೆಂಗಳೂರು: 9,000 ಟೆಕ್ನಿಷಿಯನ್ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ ಅರ್ಜಿ ಆಹ್ವಾನಿಸಿದೆ. ಮಾ.9ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಆನ್ಲೈನ್ ಮೂಲಕ ಅಧಿಕೃತ ಜಾಲತಾಣದಲ್ಲಿ ಏ.8ರೊಳಗೆ ಅರ್ಜಿ ಸಲ್ಲಿಸಬೇಕು. 1,100 ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್, 7,900 ಟೆಕ್ನಿಷಿಯನ್ ಗ್ರೇಡ್ 3 ಸಿಗ್ನಲ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಗೆ ಗರಿಷ್ಠ ವಯಸ್ಸು 18-36, ಗ್ರೇಡ್ 3 ಹುದ್ದೆಗೆ 18-33 ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.