ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ
ವಚನ: :
ಭವಿ ಮಾಡಿದುದನುಂಡರೆ ಪಾಕ ಕಿಲ್ಬಿಷವೆಂಬಿರಿ.
ಶಿವಭಕ್ತರು ಪಾದೋದಕ ಪ್ರಸಾದವ ಕೊಂಬುವಲ್ಲಿ
ಭವಿಮಿಶ್ರವೆಂದು ವಿಚಾರಿಸಿ ಕೇಳುವಿರಿ.
ಬೆಲ್ಲ, ಸಕ್ಕರೆ, ಉಪ್ಪು, ತೈಲ, ತುಪ್ಪ, ಭವಿಪಾಕವ ಭುಂಜಿಸುವಿರಿ.
‘ಯಥಾ ದೇಹಂ ತಥಾಹಂಚ ಲಿಂಗವಾಯತೆ’
ಭವಿಪಾಕ ಕಿಲ್ಬಿಷವೆಂದು ಕಿಲ್ಬಿಷವ ಭುಂಜಿಸಿದ ಬಳಿಕ
ಅಚ್ಚಲಿಂಗಾಗವೆಲ್ಲಿಹುದೊ ವ್ರತಗೇಡಿಗಳಿರಾ ?
ನಿಮ್ಮ ದೇವಭಕ್ತರೆಂದು ಪೂಜಿಸಿದವರಿಗೆ ಭವ ತಪ್ಪದು.
ನಮ್ಮ ಶಿವಗಣಂಗಳು ಅಚ್ಚಲಿಂಗೈಕ್ಯರು.
ಅವರು ಅನಾದಿ ಪಾದೋದಕ ಪ್ರಸಾದವ ಕೊಂಬುವರು.
ಅವರು ಅನಾದಿಲಿಂಗಾಂಗಿಗಳು.
ಅವರು ಮುಟ್ಟಿದ್ದೆಲ್ಲ ಪಾವನ
ಅವರು ನೋಡಿದ್ದೆಲ್ಲ ಪವಿತ್ರವೆಂದ ನಿಮ್ಮ ಶರಣಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
-ಚೆನ್ನಯ್ಯ