ಬೆಂಗಳೂರು : ಮಹರ್ಷಿ ವಾಲ್ಮೀಕಿ ನಿಗಮ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಆಂಧ್ರಪ್ರದೇಶ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ಎಂಬುವವರನ್ನ ಬಂಧಿಸಿದ್ದಾರೆ.
ಇನ್ನು, ಸಚಿವ ನಾಗೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ನೆಕ್ಕಂಟಿ ಮತ್ತು ನಾಗೇಶ್ ಎಂಬುವವರನ್ನ ಬಂಧಿಸಲಾಗಿದೆ. ಇನ್ನು, ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ಅಧಿಕೃತ ಬ್ಯಾಂಕ್ ಖಾತೆಯಿಂದ ಆಂಧ್ರದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರೋ ಹಿನ್ನೆಲೆ ಆಂಧ್ರದ ಫಸ್ಟ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಹಿಟ್ಕಾರ್ ನ ಬಂಧಿಸಿದ್ದು, ನಾಗರಾಜ್ ನೆಕ್ಕಂಟಿ ಮತ್ತು ನಾಗೇಶ ಅಣತಿ ಮೇರೆಗೆ ಹಣ ವರ್ಗಾವಣೆಯಾಗಿರೋ ಅನುಮಾನವಿದೆ.
ಚುನಾವಣಾ ಹಿನ್ನೆಲೆ ಹಣ ಕರ್ನಾಟಕದ ಬೊಕ್ಕಸದಿಂದ ಆಂಧ್ರಕ್ಕೆ ವರ್ಗಾವಣೆಯಾಗಿತ್ತಾ ಅನ್ನೋ ಅನುಮಾನ ಕೂಡ ಇದೆ. ಸದ್ಯ ಆಯಾಮದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇಂದು ಎಸ್ ಐಟಿ ಅಧಿಕಾರಿಗಳು ಯಾದಗಿರಿ ಪರಶುರಾಮ ಮನೆಯಲ್ಲಿ ಪರಿಶೀಲನೆ ನಡೆಸಲಿದ್ದಾರೆ.