ವಾಹನಗಳ ನಂಬರ್ ಪ್ಲೇಟ್ ಬದಲಾವಣೆ ಕಡ್ಡಾಯ..! ಮಾಡದಿದ್ದರೆ ಬಿಳ್ಳಲಿದೆ ದಂಡ..! ಮೊಬೈಲ್ ನಲ್ಲಿ ನಂಬರ್ ಪ್ಲೇಟ್ ಬುಕ್ ಮಾಡುವುದು ಹೇಗೆ ಇಲ್ಲಿದೆ ನೋಡಿ

WhatsApp
Telegram
Facebook
Twitter
LinkedIn

2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಲು ನಿಗದಿಸಮೀಪಿಸುತ್ತಿದ್ದರೂ ನಂಬರ್ ಪ್ಲೇಟ್ ಬದಲಾವಣೆಗೆ ವಾಹನ ಮಾಲೀಕರು ಆಸಕ್ತಿ ತೋರಿಲ್ಲ. ಹೀಗಾಗಿ ವಾಹನ ಮಾಲೀಕರಿಗೆ  ಬಿಸಿ ಮುಟ್ಟಿಸಲು ನಿರ್ಧರಿಸಿರುವ ಸಾರಿಗೆಇಲಾಖೆ ಫೆ.17ರ ನಂತರ ದಂಡಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ.

ಎಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ 2024ರ ಫೆ.17ರವರೆಗೆ ವಿಸ್ತರಣೆ ಮಾಡಲಾಗಿತ್ತು.ನಿಗದಿಪಡಿಸಿರುವ ಗಡುವು ಅಂತ್ಯವಾಗಲು ಇನ್ನು 21 ದಿನಗಳಷ್ಟೇ ಬಾಕಿ ಉಳಿದಿವೆ. ಆದರೆ, ಈವರೆಗೆ ಬರೀ 10 ಲಕ್ಷ ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಹಾಕಿಸಲಾಗಿದೆ.

1950 ರಿಂದ ಆಗಿರುವ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ. ಅವಧಿ ವಿಸ್ತರಣೆ ಮಾಡಿದರೂ ವಾಹನ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಗಡುವುಮುಗಿದ ಬಳಿಕ ವಾಹನಗಳನ್ನು ಪರಿಶೀಲಿಸಿ ದಂಡ 5 ವಿಧಿಸಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ದಂಡ ವಿಧಿಸಲಾಗುತ್ತದೆ. ಮೊದಲನೆ 5 ಬಾರಿ ಸಿಕ್ಕಿಬಿದ್ದರೆ 1000 ರೂ. ಹಾಗೂ 2ನೇ 5 ಬಾರಿ ಸಿಕ್ಕಿಬಿದ್ದರೆ 2000 ರೂ. ದಂಡ ಹಾಕಲು 5 ಕಾನೂನಿನಲ್ಲಿ ಅವಕಾಶ ಇದೆ.

ಹೀಗಾಗಿ ಫೆ.17ರ ಒಳಗೆ ಹಳೇ ವಾಹನಗಳಿಗೆ ನಿಯಮದಂತೆ ಎಚ್‌ಎಸ್‌ಆರ್‌ಪಿ ಅಳವಡಿಸಿ ಕೊಂಡು ದಂಡ ಕಟ್ಟುವುದರಿಂದ ಬಚಾವಾಗಿ ಎಂದು ವಾಹನ ಮಾಲೀಕರಿಗೆ ಸಾರಿಗೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ರಾಜ್ಯಾದ್ಯಂತ 4,000ಕ್ಕೂ ಅಧಿಕ ಡೀಲರ್ ಪಾಯಿಂಟ್‌ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ. ನಿರ್ದಿಷ್ಟ ನಿಯಮಗಳ ಅನ್ವಯ ನಂಬರ್ ಪ್ಲೇಟ್ ರೂಪಿಸಿರುವುದರಿಂದ ಸಾರಿಗೆ ఇలాఖి ಗುರುತಿ ಸಿರುವ ಪಾಯಿಂಟ್‌ಗಳಲ್ಲೇ ನಂಬರ್ ಪ್ಲೇಟ್ ಹಾಕಿ ಸಬೇಕು. ರಸ್ತೆಬದಿಯ ಗೂಡಂಗಡಿಗಳಲ್ಲಿ ಹಾಕಿಸಿದರೆ ಅಂತಹ ನಂಬರ್ ಪ್ಲೇಟ್‌ಗಳಿಗೆ ಮಾನ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಚ್‌ಎಸ್‌ಆರ್‌ಪಿ ಪ್ಲೇಟ್ ಹಾಕಿಸುವದು ಹೇಗೆ?

https://www.siam.in/hrspsubmit.aspx?mpgid=91&pgidtrail=91 ಎಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಬೇಕು. ನಂಬ‌ರ್ ಪ್ಲೇಟ್ ಅಳವಡಿಕೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರೇ ಬಂದು ಫಿಟ್ ಮಾಡುತ್ತಾರೆ.

ರಿಜಿಸ್ಟ್ರೇಷನ್ ದರ ಎಷ್ಟು?

Bike two wheeler-390 to 440

Four wheeler-680 to 690

ವಿಧಾನ ಹೇಗೆ? ಬುಕ್ ಮಾಡಿ ನಿಮ್ಮ್ ಹೊಸ ನಂಬರ ಪ್ಲೇಟ್!

HSRP REGISTRATION

Home / HSRP Registration

HSRP Registration(*) All Fields are Mandatory. You can provide either an email ID or a mobile number.

Know your customer Care Did You Know?

Full Name * :

Email * :

State * :

Delhi

Vehicle Regi. No :

Mobile * :

District * :

Delhi

By checking (√) the “I Agree” box below, you acknowledge that you have read and understood SIAM’s Terms and conditions/Privacy Policy.

✅️ I Agree

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon