ಬೆಂಗಳೂರು : ಗುಜರಾತ್ ನ ಅಹಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣ ವಿಶ್ವಕಪ್ ಪಂದ್ಯದ ಅಂತಿಮ ಹಣಾಹಣಿಯಲ್ಲಿ ಉತ್ತಮ ಜೊತೆಯಾಟದೊಂದಿಗೆ ಟ್ರೋಫಿ ಗೆದ್ದುಕೊಂಡ ಆಸ್ಟ್ರೇಲಿಯಾ ಆಟಗಾರರಿಗೆ ಅಭಿನಂದನೆಗಳು ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಸಿಎಂ, ಟೀಂ ಇಂಡಿಯಾ ತಂಡದ ಆಟಗಾರರೂ ಒಳ್ಳೆಯ ಪ್ರಯತ್ನ ನಡೆಸಿದರು. ಆದರೆ, ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕಾಗುತ್ತೆ. ನಮ್ಮವರ ಆಟವೂ ಬಹುಕಾಲ ನೆನಪಿನಲ್ಲಿ ಉಳಿಯುವಂತಿತ್ತು. ಸೋಲಿನ ದುಃಖದಲ್ಲಿರುವ ನಮ್ಮ ತಂಡದ ಜೊತೆ ನಿಲ್ಲೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
![](https://bcsuddi.com/wp-content/uploads/2025/02/WhatsApp-Image-2025-02-05-at-6.18.34-PM.jpeg)