ಮಧ್ಯಪ್ರದೇಶ : ಭೋಪಾಲ್ ನಿವಾಸಿ ಪಲ್ಲವಿ ಮಿಶ್ರಾ ಕೋಚಿಂಗ್ ಇಲ್ಲದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆಕೆ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾಗಿದ್ದರು. ಎರಡನೇ ಪ್ರಯತ್ನದಲ್ಲಿ 73ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು. ಅವರ ಯಶಸ್ಸಿನ ಕಥೆ ಇಲ್ಲಿದೆ.
ಪಲ್ಲವಿ ಮಿಶ್ರಾ 2023ರ ಬ್ಯಾಚ್ ನ ಐಎಎಸ್ ಅಧಿಕಾರಿ. ಅವರು 2022 ರಲ್ಲಿ ನಡೆದ UPSC ಪರೀಕ್ಷೆಯಲ್ಲಿ 73 ನೇ ರ್ಯಾಂಕ್ ಗಳಿಸಿದ್ದಾರೆ. ಅವರ ತಂದೆ ಅಜಯ್ ಮಿಶ್ರಾ ಹಿರಿಯ ವಕೀಲ ಮತ್ತು ತಾಯಿ ಪ್ರೊ. ಡಾ. ರೇಣು ಮಿಶ್ರಾ ಹಿರಿಯ ವಿಜ್ಞಾನಿ. ಅವರ ಹಿರಿಯ ಸಹೋದರ ಆದಿತ್ಯ ಮಿಶ್ರಾ ಇಂದೋರ್ ನ ಡಿಸಿಪಿ. ಅವರು ಐಪಿಎಸ್ ಅಧಿಕಾರಿ. ಪಲ್ಲವಿ ತನ್ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ತನ್ನ ಕುಟುಂಬಕ್ಕೆ ಮತ್ತು ವಿಶೇಷವಾಗಿ ತನ್ನ ಅಣ್ಣನಿಗೆ ನೀಡುತ್ತಾರೆ.
IAS ಪಲ್ಲವಿ ಮಿಶ್ರಾ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಅವರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ ಇತ್ತು. ಆದ್ದರಿಂದ, ಕಾನೂನು ಪದವಿ ಪಡೆದ ನಂತರ, ಅವರು ಸಂಗೀತದಲ್ಲಿ ಎಂಎ ಮಾಡಿದರು. ಅವರು ತರಬೇತಿ ಪಡೆದ ಶಾಸ್ತ್ರೀಯ ಗಾಯಕಿ. ಐಎಎಸ್ ಪಲ್ಲವಿ ಬಾಲ್ಯದಿಂದಲೂ ದಿವಂಗತ ಪಂಡಿತ್ ಸಿದ್ದರಾಮ ಕೋರವಾರ ಅವರಿಂದ ಸಂಗೀತ ಕಲಿಯುತ್ತಿದ್ದರು.
ಪಲ್ಲವಿ ಮಿಶ್ರಾ ಯುಪಿಎಸ್ ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಆದರೆ ಛಲ ಬಿಡದೆ ಮತ್ತೆ ತಯಾರಿ ನಡೆಸಿದರು.
ಪಲ್ಲವಿ ಮಿಶ್ರಾ ಯುಪಿಎಸ್ ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಆದರೆ ಛಲ ಬಿಡದೆ ಮತ್ತೆ ತಯಾರಿ ನಡೆಸಿದರು.ಮೊದಲ ಪ್ರಯತ್ನದಲ್ಲಿ ಅವರು ಪ್ರಬಂಧದ ವಿಷಯವನ್ನು ತಪ್ಪಾಗಿ ಓದಿದ್ದರು. UPSC ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ, ಅವರು ಪ್ರಬಂಧ ಬರವಣಿಗೆಯಲ್ಲಿ ಸಾಕಷ್ಟು ಅಭ್ಯಾಸ ಮಾಡಿದರು