ಶ್ರೀಶಿವಲಿಂಗಾನಂದ ಶ್ರೀಗಳವರ ಜನ್ಮ ದಿನಾಚರಣೆ.! ಎಸ್.ಕೆ.ಬಸವರಾಜನ್ ಮಾತನಾಡಿದ್ದು ಹೀಗೆ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಸ್ವಾಮಿಗಳಾದವರು ಆರೋಗ್ಯವಂತರಾಗಿದ್ದಾಗ ಮಾತ್ರ ಸಮಾಜಕ್ಕೆ ತಿಳುವಳಿಕೆಯನ್ನು ನೀಡಲು ಸಾಧ್ಯವಿದೆ. ಜೊತೆಗೆ ಸಮಾಜದ ಕೊಳೆಯನ್ನು ತೊಳೆಯಲು ಸಾಧ್ಯವಿದೆ. ಅಂತಹ ಆರೋಗ್ಯವನ್ನು ಶಿವಲಿಂಗಾನಂದ ಶ್ರೀಗಳು ಹೊಂದಿದ್ದಾರೆ ಎಂದು ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್ ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿರುವ ಶ್ರೀ ಕಬೀರಾನಂದ ಆಶ್ರಮದ ಆವರಣದಲ್ಲಿ ಶನಿವಾರ ಸಂಜೆ ಪೀಠಾಧಿಪತಿಗಳಾದ ಶ್ರೀಶಿವಲಿಂಗಾನಂದ ಶ್ರೀಗಳವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವ ಆರೋಗ್ಯ ಮಾನಸಿಕ ಮತ್ತು ದೈಹಿಕವಾಗಿ ಚನ್ನಾಗಿ ಇರಬೇಕಿದೆ ಇದಕ್ಕೆ ಅಗತ್ಯವಾಗಿ ಬೇಕಾದ ವ್ಯಾಯಾಮ ಯೋಗವನ್ನು ಮಾಡಬೇಕಿದೆ.

ದೈಹಿಕವಾಗಿ ದುಶ್ಚಟಗಳಿಗೆ ಬಲಿಯಾಗುವುದು, ಕೆಟ್ಟ ವಿಚಾರಗಳಿಗೆ ಬಲಿಯಾಗಿ ಮಾನಸಿಕವಾಗಿ ಸಮತೋಲನವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಎರಡನ್ನು ಸಹಾ ಸರಿಯಾಗಿ ಇಟ್ಟುಕೊಳ್ಳುವುದರ ಮೂಲಕ ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದಾಗಿದೆ.

ಶಿವಲಿಂಗಾನಂದ ಶ್ರೀಗಳು ಈ ಎರಡನ್ನು ಸಹಾ ಸರಿಯಾಗಿ ಇಟ್ಟುಕೊಂಡಿರುವುದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಿದ್ದಾರೆ. ಸ್ವಾಮಿಗಳಾದವರು ಆರೋಗ್ಯವಂತರಾಗಿರಬೇಕಿದೆ. ಅಗ ಸಮಾಜಕ್ಕೆ ತಿಳುವಳಿಕೆಯನ್ನು ನೀಡಲು ಸಾಧ್ಯವಿದೆ.

ಒಂದು ಕಾಲದಲ್ಲಿ ಈ ಮಠ ಹಾಳು ಕೊಂಪೆಯಾಗಿತ್ತು. ಇಲ್ಲಿ ಯಾರೂ ಸಹಾ ಬರಲು ಸಾಧ್ಯವಿಲ್ಲ ಇರಲಿಕ್ಕೂ ಸಹಾ ಸಾಧ್ಯವಿಲ್ಲದ ವಾತಾವರಣ ಇತ್ತು. ಈ ರೀತಿಯಾದ ವಾತಾವರಣ ಇರಲಿಲ್ಲ, ಮುರುಘಾಮಠಕ್ಕೆ ನಾನು ಒಂದಾಗ ಈ ಮಠದಲ್ಲಿ ಒಂದು ದಿನ ಕಳೆದಿದೆ. ಆಗ ಯಾವುದೇ ವ್ಯವಸ್ಥೆ ಇರಲಿಲ್ಲ, ಕೊಂಪೆಯಾಗಿತ್ತು, ಈ ರೀತಿ ಇದ್ದ ಕೊಂಪೆಯನ್ನು ಈಗ ಸುಂದರವಾದ ಮಠವನ್ನಾಗಿ ಶ್ರೀಗಳು ಬಂದ ಮೇಲೆ ಮಾಡಿದ್ದಾರೆ. ಇಲ್ಲಿಗೆ ಬರುವ ಭಕತ ತಮ್ಮ ದುಗುಡ ದುಮ್ಮಾನಗಳನ್ನು ಶ್ರೀಗಳವರ ಬಳಿಯಲ್ಲಿ ಹೇಳಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಇಂದಿನ ದಿನಮಾನದಲ್ಲಿ ಮಠಗಳಿಗೆ ಒಳ್ಳೇಯ ಸ್ವಾಮಿಗಳು ಸಿಗುವುದು ಕಷ್ಠವಾಗಿದೆ. ಮಠದ ಮತ್ತು ಭಕ್ತ ಹಣೆ ಬರಹ ಚನ್ನಾಗಿ ಇದ್ದರೆ ಮಾತ್ರ ಉತ್ತಮವಾದ ಸ್ವಾಮಿಗಳು ಸಿಗಲು ಸಾಧ್ಯವಿದೆ. ಆದಿಚುಂಚನ ಗಿರಿ ಶ್ರೀಗಳು ಇವರನ್ನು ಇಲ್ಲಿಗೆ ಕಳುಹಿಸುವುದರ ಮೂಲಕ ಈ ಮಠದ ಉಸ್ತುವಾರಿಯನ್ನು ನೋಡಿಕೋ ಎಂದಾಗ ಇಲ್ಲಿಗೆ ಬಂದ ಶ್ರೀಗಳು ಹಲವಾರು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭ ಮಾಡಿನ ಮಕ್ಕಳಿಗೆ ವಿದ್ಯಾದಾನ, ಅನ್ನದಾನ, ಗೋವುಗಳನ್ನು ರಕ್ಷಣೆ, ವೃದ್ದರಿಗೆ ಆಶ್ರಯವನ್ನು ನೀಡುವ ಆಶ್ರಯ ತಾಣವಾಗಿ ಪರಿಣಿಮಿಸಿದೆ ಎಂದು ತಿಳಿಸಿದರು.

ಈ ಮಠಕ್ಕೆ ಆಗ ಯಾವುದೇ ರೀತಿಯ ಆಸ್ತಿಯಾಗಲು ಖಾಯಂ ಆದ ಭಕ್ತರಾಗಲಿ ಇರಲಿಲ್ಲ ಈ ಸಮಯದಲ್ಲಿ ಬಂದ ಶ್ರೀಗಳು ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಮಠವನ್ನು ಸಮೃಧ್ದಗೊಳಿಸಿ, ಮುಂದೆ ಬವರುವವರುಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾಡಿದ್ದಾರೆ. ತಮಗೆ ಏನೇ ಕಷ್ಠ ಬಂದರೂ ಸಹಾ ಯಾರ ಮುಂದೆಯೂ ಹೇಳದೆ ತಮ್ಮ ಕಷ್ಠಕ್ಕೆ ತಾವೇ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದರಿಂದ ಈ ಮಠ ಉತ್ತಮ ಸ್ಥಿತಿಯನ್ನು ತಲುಪಿದೆ. ಮಠಕ್ಕೆ ಯಾವುದೇ ಜಾತಿ, ಧರ್ಮ, ಸಂಪ್ರದಾಯ, ಕಟ್ಟೆಳೆ ಇಲ್ಲ ಎಲ್ಲರನ್ನು ಸಹಾ ಅಪ್ಪಿಕೊಳ್ಳುವ ಮಠವಾಗಿದೆ ಎಂದ ಬಸವರಾಜನ್ ಹೇಳಿದರು.

ಯಾವುದೇ ಒಂದು ಮಠದಿಂದ ವ್ಯಕ್ತಿ ದೊಡ್ಡವನಾಗಬಾರದರು ವ್ಯಕ್ತಿಯಿಂದ ಮಠ ದೊಡ್ಡದಾಗಬೇಕಿದೆ. ಇದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಇಂದಿನ ದಿನಮಾನದಲ್ಲಿ ಮಠದಲ್ಲಿ ಸಂಪತ್ತು, ಐಶ್ವರ್ಯ, ಆಸ್ತಿ ಇದ್ದರೆ ಮಾತ್ರ ಮಠಕ್ಕೆ ಸ್ವಾಮಿಯಾಗುತ್ತೇನೆ ಎಂಬ ಮನೋಭಾವ ಬಹಳರಲ್ಲಿ ಇದೆ. ಆದರೆ ಶ್ರೀಗಳು ಏನು ಇಲ್ಲದ ಮಠಕ್ಕೆ ಬಂದು ಇಷ್ಟೊಂದು ಸಂಪತ್ತ್ನ್ನು ಮಾಡಿದ್ದಾರೆ. ಮಠದಿಂದ ನಾನಲ್ಲ ನಾನಿದ್ದರೆ ಮಠ ಎನ್ನುವಂತ ಮಾಡಿದ್ದಾರೆ. ಶ್ರೀಗಳ ಈ ಆದರ್ಶ ಬೇರೆ ಸ್ವಾಮಿಗಳು ಪಾಲನೆ ಮಾಡಬೇಕಿದೆ ಶ್ರೀಗಳು ಶತಾಯಿಷಿಗಳಾಗಲಿ ಎಂದರು.

ಸಮಾರಂಭದ ಸಾನಿಧ್ಯವಹಿಸಿದ್ದ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಶಿವಲಿಂಗಾನಂದ ಶ್ರೀಗಳು ಬರೀ ಒಂದು ಮಠದ ಪೀಠಾಧ್ಯಕ್ಷರಲ್ಲ ತಾಯಿ ಹೃದಯವನ್ನು ಹೊಂದಿದ್ದ ಮಠಾಧೀಶರಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿ ಒಂದೊಂದು ಜಾತಿಗೆ ಒಂದು ಮಠ ಇದೆ ಇದರಲ್ಲಿ ಕಬೀರಾನಂದಾಶ್ರಮ ಯಾವುದೇ ಜಾತಿ,ಧರ್ಮ, ಜನಾಂಗದ ಸೊಂಕು ಇಲ್ಲದೆ ಎಲ್ಲರನ್ನು ಸಹಾ ತಮ್ಮವರು ಎಂದು ಹೇಳಿಕೊಳ್ಳುತ್ತಾ ಬಂದ ಎಲ್ಲರನ್ನು ಸಹಾ ತನ್ನ ಭಕ್ತರನ್ನಾಗಿ ಮಾಡುತ್ತಿದೆ. ಈ ಮಠವನ್ನು ಶ್ರೀಗಳು ಜಾತ್ಯಾತೀತ ಮಠವನ್ನಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಸಹಾ ಜಾತ್ಯಾತೀತವಾಗಿ ಇದ್ದಾರೆ ಎಲ್ಲರಿಗೂ ಸಹಾ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದ ಅವರು.ಶ್ರೀಗಳು ನಡೆಸುವ ಶಿವರಾತ್ರಿ ಮಹೋತ್ಸವ ಚಿತ್ರದುರ್ಗಕ್ಕೆ ಅಷ್ಠೇ ಅಲ್ಲ ಮಧ್ಯ ಕರ್ನಾಟಕಕ್ಕೆ ನಾಡಹಬ್ಬವಾಗಿ ಪರಿಣಮಿಸಿದೆ. ಶ್ರೀಗಳು ಸಂಸ್ಕøತದಲ್ಲಿ ಅಭ್ಯಾಸವನ್ನು ಮಾಡುವುದರ ಮೂಲಕ ಬಂಗಾರದ ಪದಕವನ್ನು ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕಬೀರಾನಂದ ಆಶ್ರಮದ ಪೀಠಾಧಿಪತಿಗಳಾದ ಶ್ರೀಶಿವಲಿಂಗಾನಂದ ಶ್ರೀಗಳು, ವಚನಾನಂದ ಶ್ರೀಗಳು, ಕೈಲಾಸಪತಿ ಶ್ರೀಗಳು, ಜ್ಯೋರ್ತಿಲಿಂಗ ಶ್ರೀಗಳು ಸಾನಿಧ್ಯವಹಿಸಿದ್ದು, ನಗರಸಭೆಯ ಸದಸ್ಯರಾದ ಭಾಸ್ಕರ್, ಗುತ್ತಿಗೆದಾರರಾದ ಶಿವಕುಮಾರ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿಯ ನಿರ್ದೆಶಕರಾದ ಸಿದ್ದವ್ವನಹಳ್ಳಿ ಪರಮೇಶ್, ಜಿ.ಪಂ. ನಿವೃತ್ತ ವ್ಯವಸ್ಥಾಪಕರಾಧ ನಾಗರಾಜ್ ಸಗಂ, ಹಿರಿಯ ಪತ್ರಕರ್ತರಾದ ಉಜ್ಜನಪ್ಪ, ಪಿಳ್ಳೇಕೇರನಹಳ್ಳಿ ದೇವೇಂದ್ರಪ್ಪ, ಗಣಪತಿ ಶಾಸ್ತ್ರಿ, ನಿರಂಜನ ಮೂರ್ತಿ, ತಿಪ್ಪೇಸಾಮಿ, ಸೇರಿದಂತೆ ಇತರರು ಭಾಗವಹಿಸಿದ್ದರು.

ಸುಬ್ರಾಯ್ ಭಟ್ಟರು ವೇದ ಘೋಷಗಳನ್ನು ಮಾಡಿದರೆ ಶ್ರೀಮತಿ ಸಮನ ಪ್ರಾರ್ಥಿಸಿದರು, ಬಸವರಾಜು ಸ್ವಾಗತಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon