ಮುಂಬೈ: ಟಿವಿ ಸಾಮಾಜಿಕ ಜಾಲತಾಣದಲ್ಲಿ ಸರಳ ಜೀವನದ ಬಗ್ಗೆ ಉದ್ದುದ್ದ ಭಾಷಣ ಬೀಡುತ್ತಿದ್ದ ಆಧ್ಯಾತ್ಮಿಕ ವಾಗ್ಮಿ ಮತ್ತು ಭಕ್ತಿಗೀತೆ ಗಾಯಕಿ ಜಯ ಕಿಶೋರಿ ಮಾತ್ರ ಕೈಯಲ್ಲಿ 2 ಲಕ್ಷ ಬೆಲೆ ಬಾಳುವ ಕರುವಿನ ಚರ್ಮದಿಂದ ಮಾಡಿದ ಬ್ಯಾಗ್ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರು ತಿರುಗಾಡುತ್ತಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಜಯ ಕಿಶೋರಿ ಅವರು ತಮ್ಮ ಆಧ್ಯಾತ್ಮಿಕ ಪ್ರವಚನಗಳು ಮತ್ತು ಗಾಯನದಿಂದ ಖ್ಯಾತಿ ಪಡೆದಿದ್ದಾರೆ. ತಮ್ಮನ್ನು ಶ್ರೀಕೃಷ್ಣನ ಭಕ್ತೆ ಎಂದು ಹೇಳುವ ಅವರ ಪ್ರವಚನ ಕೇಳಲು ಲಕ್ಷಾಂತರ ಜನ ಆಗಮಿಸುತ್ತಾರೆ. ತಮ್ಮ ಪ್ರವಚನದಲ್ಲಿ ಸರಳ ಜೀವನವೇ ಸುಂದರ, ನಿಜವಾದ ಸಂತೋಷ ಬೇಕು ಎಂದರೆ ಭೌತಿಕ ಸುಖ ತ್ಯಜಿಸಬೇಕು’ ಎಂದು ಆಗಾಗ ಹೇಳುತ್ತಿರುತ್ತಾರೆ. ಆದರೆ, ಇದೇ ಜಯಾ ಕಿಶೋರಿ ಅವರು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.