ಬೆಂಗಳೂರು: ರಾಜ್ಯ ಸರಕಾರದಲ್ಲಿ ಮತ್ತೆ ವರ್ಗಾವಣೆ ಪರ್ವ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಸರಕಾರ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಆದೇಶ ನೀಡಿತ್ತು. ಈಗ 10 ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಆದೇಶ ನೀಡಲಾಗಿದೆ. ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು… ಮಹಮ್ಮದ್ ಮೊಸಿನ್ ಪ್ರಧಾನ ಕಾರ್ಯದರ್ಶಿ ಕಾರ್ಮಿಕ ಇಲಾಖೆ, ಟಿ.ಹೆಚ್ಎಂ ಕುಮಾರ್ ವ್ಯವಸ್ಥಾಪಕ ನಿರ್ದೇಶಕರು ಕೆಎಸ್ಎಸ್ಐಡಿಸಿ, ಆರ್. ಸ್ನೇಹಲ್ ನಿರ್ದೇಶಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಪ್ರಭುಲಿಂಗ ಕವಳಿಕಟ್ಟಿ ಆಯುಕ್ತರು ಪಶು ಸಂಗೋಪನ ಇಲಾಖೆ, ಜಿ ಲಕ್ಷ್ಮಿಕಾಂತ್ ರೆಡ್ಡಿ ಜಂಟಿ ವ್ಯವಸ್ಥಾಪಕ ನಿರ್ದೇಶಕರು, ಪಾಂಡೆ ರಾಹುಲ್ ತುಕರಾಮ್, ಸಿ ಇ ಓ ರಾಯಚೂರು ಜಿಲ್ಲಾ ಪಂಚಾಯಿತಿ, ಎಸ್ ಜೆ ಸೋಮಶೇಖರ್ ಸಿಇಒ ಚಿತ್ರದುರ್ಗ ಜಿಲ್ಲಾ ಪಂಚಾಯತಿ, ಎಸ್ ರಂಗಪ್ಪ ನಿರ್ದೇಶಕ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಕಂದಾಯ ಇಲಾಖೆ, ಡಾ. ಎಸ್ ಆಕಾಶ್ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಕಲಬುರ್ಗಿ, ಅನ್ಮೋಲ್ ಜೈನ್ ನೋಂದಣಿ ಇಲಾಖೆ ಡಿಐಜಿ (ವಿಚಕ್ಷಣ ದಳ) ಬೆಂಗಳೂರು
