ಮುಂಬೈ: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ವಿರುದ್ಧ ಹಲವು ಬಾರಿ ಜೀವ ಬೆದರಿಕೆಗಳು ಬಂದಿವೆ. ಈ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಇದೀಗ ಜೀವ ಬೆದರಿಕೆ ಬಂದಿದೆ. ಛತ್ತೀಸ್ಗಢದ ರಾಯ್ಪುರದ ಫೈಜಾನ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾದ ನಂಬರ್ನಿಂದ ಬೆದರಿಕೆ ಬಂದಿದೆ ಎಂದು ಎಬಿಪಿ ಲೈವ್ ವರದಿ ಮಾಡಿದೆ. ಶಾರುಖ್ ಖಾನ್ ತಂಡ ಮುಂಬೈನ ಬಾಂದ್ರಾ ಪೊಲೀಸರಿಗೆ ದೂರು ನೀಡಿದೆ.
