ತನ್ನ ಕೊನೆಯ ಹಾಡನ್ನು ತನ್ನ ಏಳು ವರ್ಷದ ಮಗನಿಗೆ ಅರ್ಪಿಸಿ ವೈರಲ್ ಆಗಿದ್ದ ಗಾಯಕಿ ಕ್ಯಾಟ್ ಜಾನಿಸ್ ಸಾವನ್ನಪ್ಪಿದ್ದಾರೆ. 31 ವರ್ಷದ ಕ್ಯಾಟ್ ಜಾನಿಸ್ ಅವರು ಸಾರ್ಕೋಮಾ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದರು.
“ಇಂದು ಬೆಳಿಗ್ಗೆ … ಕ್ಯಾಥರೀನ್ ತನ್ನ ಸ್ವರ್ಗೀಯ ಸೃಷ್ಟಿಕರ್ತನ ಬೆಳಕು ಮತ್ತು ಪ್ರೀತಿಯನ್ನು ಶಾಂತಿಯುತವಾಗಿ ಪ್ರವೇಶಿಸಿದಳು” ಎಂದು ಜಾನಿಸ್ ಸಹೋದರ ಘೋಷಿಸಿದ್ದಾರೆ. “ನಾನು ನನ್ನ ಹಾಡುಗಳ ಎಲ್ಲಾ ಹಕ್ಕುಗಳನ್ನು ನನ್ನ ಮಗನಿಗೆ ಬದಲಾಯಿಸಿದ್ದೇನೆ. ಈ ಮೂಲಕ ಅವನಿಗಾಗಿ ಕೆಲವೊಂದಿಷ್ಟು ಜವಾಬ್ದಾರಿ ಬಿಟ್ಟು ಹೋಗುತ್ತಿದ್ದೇನೆ” ಎಂದು ಜಾನಿಸ್ ಈ ಹಿಂದೆ ಹೇಳಿದ್ದರು.