ಸಾಮಾನ್ಯವಾಗಿ ಬೆಂಕಿ ತಾಗಿದಾಗ ಮನೆಮದ್ದಿನ ಮೊರೆ ಹೋಗುತ್ತೇವೆ. ಅಥವಾ ತಕ್ಷಣ ಕಣ್ಣೆದುರಿಗೆ ಸಿಕ್ಕ ವಸ್ತುಗಳನ್ನು ಬೆಂಕಿ ತಾಗಿದ ಜಾಗಕ್ಕೆ ಹಚ್ಚಿಕೊಳ್ಳುತ್ತೇವೆ. ಸಣ್ಣ ಪುಟ್ಟ ಸುಡುವಿಕೆಯಾದರೆ 20 ನಿಮಿಷಗಳ ಕಾಲ ಅದರ ಮೇಲೆ ನೀರನ್ನು ಹರಿಸಿಬೇಕು.
ನಂತರ ಸಾಬೂನು ಮತ್ತು ನೀರಿನಿಂದ ತೊಳೆಯಬೇಕು.ಯಾವುದೇ ಕಾರಣಕ್ಕೂ ಗಾಯದ ಮೇಲೆ ಬೆಣ್ಣೆಯನ್ನು ಹಚ್ಚಬಾರು. ಏಕೆಂದರೆ ಬೆಣ್ಣೆ ಶಾಖವನ್ನು ಉಳಿಸಿಕೊಳ್ಳುತ್ತದೆ. ಮಾತ್ರವಲ್ಲದೆ ಗಾಯವನ್ನು ಹದಗೆಡಿಸುತ್ತದೆ. ವೀಳ್ಯದೆಲೆಯಲ್ಲಿ ಉತ್ತಮ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್ಗಳಿವೆ. ಇವು ಸುಟ್ಟ ಗಾಯಗಳನ್ನು ಶೀಘ್ರವಾಗಿ ಒಣಗಿಸಲು ನೆರವಾಗುತ್ತವೆ.ಗಾಯದ ಮೂಲಕ ನಷ್ಟವಾಗಿರುವ ಅಂಗಾಂಶಗಳನ್ನು ಮತ್ತೆ ಮರುತುಂಬಿಸಲು ಹಾಗೂ ಅದರಲ್ಲಿ ಪೂರ್ಣ ಪ್ರಮಾಣದ ಪ್ರೋಟೀನ್ಗಳಿರುವಂತೆ ಸಹಕರಿಸುತ್ತದೆ.
ಕೆಲವು ವೀಳ್ಯದೆಲೆಗಳನ್ನು ಹಿಂಡಿ ತೆಗೆದ ರಸವನ್ನು ಸುಟ್ಟ ಗಾಯದ ಮೇಲೆ ಹಚ್ಚಿ ಬಳಿಕ ಒಂದೆರಡು ಎಲೆಗಳನ್ನು ಗಾಯದ ಮೇಲೆ ಸುತ್ತಿ ಬ್ಯಾಂಡೇಜ್ ಮಾಡಿ. ಇದರಿಂದ ಗಾಯ ಒಂದೆರಡು ದಿನಗಳಲ್ಲಿಯೇ ಮಾಗುತ್ತದೆ. ತಾಜಾ ಲೋಳೆಸರದ ಕೋಡೊಂದನ್ನು ತೆರೆದು ತಿರುಳನ್ನು ಸಂಗ್ರಹಿಸಿ ನೇರವಾಗಿ ಸುಟ್ಟಭಾಗದ ಮೇಲೆ ಹಚ್ಚಬೇಕು. ಲೋಳೆಸರ ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಈ ಗುಣ ಉರಿಯುತ್ತಿರುವ ಗಾಯವನ್ನು ತಣಿಸಿ ಉರಿಯನ್ನು ಇಲ್ಲವಾಗಿಸುತ್ತದೆ.

































