ಆನೇಕಲ್: ಸ್ಕೂಲ್ ಬಸ್ ಹರಿದು 2ನೇ ತರಗತಿ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಎಂ.ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಿವ್ಯಾಂಶು ಸಿಂಗ್(8) ಮೃತಪಟ್ಟ ಬಾಲಕ. ಬಿದರಗೆರೆಯ ಎಸ್.ಎಸ್.ವಿ ಶಾಲೆಯ 2ನೇ ತರಗತಿ ವಿದ್ಯಾರ್ಥಿ ದಿವ್ಯಾಂಶು, ಜು. 06 ಸಂಜೆ 6 ಗಂಟೆ ಸಮಯಕ್ಕೆ ಟ್ಯೂಶನ್ ಮುಗಿಸಿ ಶಾಲಾ ವಾಹನದಿಂದ ಇಳಿದು ಮನೆ ಕಡೆ ತರೆಳಲು ರಸ್ತೆ ದಾಟುತ್ತಿದ್ದಾಗ ಅದೇ ಶಾಲೆಯ ವಾಹನದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಚಾಲಕನ ಅಜಾಗರೂಕತೆ ಚಾಲನೆಯಿಂದ ಬಾಲಕ ಬಲಿಯಾಗಿದ್ದಾನೆ.
ಪೌರಾಣಿಕ ಪಾತ್ರಗಳಿಗೆ ಅಪ್ರತಿಮ ಚಿತ್ರಣಗಳಿಂದ ಜೀವ ತುಂಬಿದ್ದ ಕಲಾವಿದ ನಂಬೂದರಿ ನಿಧನ
ಮೇಡಹಳ್ಳಿಯ ಸಾಯಿ ಪ್ಯಾರಡೈಸ್ ಬಡಾವಣೆಯಲ್ಲಿ ವಾಸವಿದ್ದ ದಿವ್ಯಾಂಶು ಪೋಷಕರು, ಎಂದಿನಂತೆ ಮಗನನ್ನು ಶಾಲೆಗೆ ಕಳಿಸಿದ್ದಾರೆ. ದಿವ್ಯಾಂಶು ಶಾಲೆಗೆ ಹೋಗಿ ಸಂಜೆ ಟ್ಯೂಶನ್ ಮುಗಿಸಿ ಶಾಲಾ ಬಸ್ನಲ್ಲಿಯೇ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಶಾಲಾ ವಾಹನದಲ್ಲಿ ಮನೆ ಸಮೀಪ ಇಳಿದಿದ್ದ ದಿವ್ಯಾಂಶು, ಶಾಲಾ ವಾಹನದ ಮುಂಭಾಗದಿಂದ ರಸ್ತೆ ದಾಟಿ ಮನೆಯ ಕಡೆಗೆ ಹೋಗಲು ಮುಂದಾಗಿದ್ದಾನೆ. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಬಾಲಕನ ಮೇಲೆ ಬಸ್ ಹರಿದಿದೆ. ವಾಹನಕ್ಕೆ ಸಿಬ್ಬಂದಿ ನೇಮಿಸದೆ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ್ದು ಚಾಲಕನ ಬೇಜವಾಬ್ದಾರಿಗೆ ಪುಟ್ಟ ಬಾಲಕ ಬಲಿಯಾಗಿದ್ದಾನೆ.
 
				 
         
         
         
															 
                     
                     
                     
                    


































 
    
    
        