ಹೇರಳವಾದ ಮಿನರಲ್ಸ್ ಮತ್ತು ವಿಟಮಿನ್ಸ್ಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ, ಇಲ್ಲಿದೆ ನೋಡಿ ಸ್ಟ್ರಾಬೆರಿ ಹಣ್ಣಿನ ಉಪಯೋಗಗಳು.
ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಫೈಬರ್ ಅಂಶವನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ವೇಗವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿದೆ. ಸ್ಟ್ರಾಬೆರಿಯಲ್ಲಿನ ವಿಟಮಿನ್ ಸಿ ಅಂಶಗಳು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜತೆಗೆ ದೇಹದ ವಿವಿಧ ಭಾಗಗಳ ನೋವನ್ನು ತೆಗೆಯಲು ನೆರವಾಗುತ್ತದೆ.
ಸ್ಟ್ರಾಬೆರಿಗಳನ್ನು ನಿಯಮಿತವಾಗಿ ಸೇವಿಸುವ ವ್ಯಕ್ತಿಗಳಿಗೆ ಅಧಿಕ ರಕ್ತದೊತ್ತಡದ ಅಪಾಯವು ಕಡಿಮೆಯಾಗುತ್ತದೆ ಎಂದು ಫಲಿತಾಂಶಗಳು ತೋರಿಸಿವೆ. ಟೈಪ್ 2 ಮಧುಮೇಹದ ಸಂದರ್ಭದಲ್ಲಿ ಸ್ಟ್ರಾಬೆರಿ ಪ್ರಯೋಜನಕಾರಿಯಾಗಿದೆ.
ಸ್ಟ್ರಾಬೆರಿಯು ಫ್ಲೇವನಾಯ್ಡ್ಗಳನ್ನು ಹೊಂದಿದ್ದು, ಇದು ಗ್ಲೂಕೋಸ್ ಸೇವನೆಯನ್ನು ಪ್ರತಿಬಂಧಿಸುವ ಮೂಲಕ ಮತ್ತು ರಕ್ತ-ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಮಧುಮೇಹ-ವಿರೋಧಿ ಕ್ರಿಯೆಯನ್ನು ತೋರಿಸಬಹುದು. ಸ್ಟ್ರಾಬೆರಿ ಹಣ್ಣುಗಳ ಸಲಾಡ್ ಅನ್ನು ಮೊಸರಿನೊಂದಿಗೆ ಬೆಳಗ್ಗಿನ ಉಪಹಾರವಾಗಿಯೂ ಸೇವಿಸಬಹುದು.