ಎದುರಿನಲ್ಲಿ ಪ್ರೀತಿಯಿಂದ ಮಾತನಾಡುತ್ತಾ, ಬೆನ್ನ ಹಿಂದೆ ಮಸಲತ್ತು ನಡೆಸುವ ಗೆಳೆಯರಿಂದ ದೂರವಿರಬೇಕು.
ಇವರು ನಿಮ್ಮ ಸ್ನೇಹ, ನಂಬಿಕೆ ಎರಡಕ್ಕೂ ಮೋಸ ಮಾಡಬಹುದು. ಕೆಲವರು ಜೊತೆಗೇ ಇದ್ದು ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ.
ಅಲ್ಲದೆ ನಿಮ್ಮ ವೈರಿಗಳ ಜೊತೆ ಸೇರಿಕೊಂಡು ನಿಮ್ಮಿಂದಲೂ ಹಾಗೂ ಅವರಿಂದಲೂ ಸಹಾಯ ಪಡೆಯುತ್ತಿರುತ್ತಾರೆ. ಈ ಬಗ್ಗೆ ಸ್ವಲ್ಪ ಗುಮಾನಿ ಬಂದರೂ ಅವರನ್ನು ದೂರ ಮಾಡಬೇಕು.
ಹಣ, ಉಪಕಾರಕ್ಕೆ ನಿಮ್ಮನ್ನು ಬಳಸಿಕೊಳ್ಳುವ ಸ್ನೇಹಿತರನ್ನು ಗುರುತಿಸಿ. ನಿಜವಾದ ಸ್ನೇಹ ಪರೋಪಕಾರ ಬಯಸುವುದಿಲ್ಲ.
				
															
                    
                    
                    
                    
































