ಅಂಬೇಡ್ಕರ್ ಇಲ್ಲದ ಯಾವ ಬದಲಾವಣೆ ತರಲು ಸಾಧ್ಯವಿಲ್ಲ : ಪತ್ರಕರ್ತ ಮೇ.ನಾ. ಅಹೋಬಳಪತಿ

 

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಿರ್ಲಕ್ಷ ಮಾಡಲಾಗಿದೆ ಎಂಬ ವಾದವು ಹಾಗಾಗ ನಡೆಯುತ್ತದೆ. ಅಂಬೇಡ್ಕರ್ ಇಲ್ಲದ ಯಾವ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಮೇ.ನಾ. ಅಹೋಬಳಪತಿ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಾಲಕರ ಪದವಿ ಪೂರ್ವ ಕಾಲೇಜು ಆಯೋಜಿಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ವಿಚಾರಗಳನ್ನು ಈಗ ಹೆಚ್ಚೆಚ್ಚು ಮುನ್ನೆಲೆಗೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆದವು. ಒಂದುವರೆ ದಶಕದಲ್ಲಂತೂ ತುಂಬಾ ಪರಿಣಾಮಕಾರಿಯಾಗಿ ನಡೆದಿವೆ ಎಂದು ಹೇಳಿದರು.

Advertisement

ಈ ನೆಲದಲ್ಲಿ ಎಂಬ ಚರ್ಚೆಗಳು ಶೈಕ್ಷಣಿಕ, ಹೋರಾಟದ ವಲಯದಲ್ಲಿ ನಡೆಯುತ್ತಿವೆ. ಆದರೆ ಶೈಕ್ಷಣಿಕ ವಲಯದ ಅಧ್ಯಯನಗಳೇ ಹೆಚ್ಚು ತೆರೆದುಕೊಂಡವು. ಚಳವಳಿಗಳು ದೊಡ್ಡಮಟ್ಟದಲ್ಲಿ ಇದ್ದಾಗಲೂ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಹೊಸ ಹೊಸ ಸಾಮಾಜಿಕ ವಿಜ್ಞಾನಗಳಲ್ಲಿ ಆದಂತಹ ಸಂಶೋಧನೆ, ಚರ್ಚೆಗಳು, ವಾಗ್ವಾದಗಳು ಮತ್ತು ಭಾರತದ ಸಂದರ್ಭದಲ್ಲಿ ಉಂಟಾದ ಸಾಮಾಜಿಕ ಬಿಕ್ಕಟ್ಟುಗಳು ಪ್ರಜಾ ತಾಂತ್ರಿಕ ಬಿಕ್ಕಟ್ಟುಗಳು ಅದರ ನಿವಾರಣೆ ಮಾರ್ಗಗಳ ಏನು ಎಂದು ಹುಡುಕಲು ಹೋರಾಟದ ಅಂಬೇಡ್ಕರ್ ಅಲೋಚನೆಗಳು ದೊಡ್ಡ ದಾರಿದೀಪ ಅನಿಸಿವೆ ಎಂದು ಹಿರಿಯ ಪತ್ರಕರ್ತ ಮೇ.ನಾ. ಅಹೋಬಳಪತಿ ತಿಳಿಸಿದರು.

ಬೇರೆ ಬೇರೆ ದೇಶಗಳಲ್ಲಿ ಯುಗ ಪ್ರವರ್ತಕರನ್ನು ನೋಡುತ್ತೇವೆ. ರಷ್ಯಾ, ಲೆನಿನ್, ಚೈನಾ, ಮಾವೋ, ಸ್ಟಾಲಿನ್ ಈ ರೀತಿ ದೊಡ್ಡ ದೊಡ್ಡ ಪ್ರವರ್ತಕರನ್ನು ನೋಡುತ್ತೇವೆ. ಭಾರತದ ಮಟ್ಟಿಗೆ ದೊಡ್ಡಪಟ್ಟಿಯೇ ಇದೆ. ಆದರೆ, ನಿಜವಾದ ಅರ್ಥದಲ್ಲಿ ಭಾರತೀಯ ಸಮಾಜದಲ್ಲಿ ಆಧುನಿಕ ಯುಗ ಪ್ರವರ್ತಕನೆಂದು ಪರಿಗಣಿಸುವುದಾದರೆ ಅದು ಅಂಬೇಡ್ಕರ್ ಮಾತ್ರ. ಎಂದು ತಿಳಿಸಿದರು.

ಉಪನ್ಯಾಸಕ ಡಾ.ಕೃಷ್ಣಪ್ಪ.ಬಿ. ಮಾತನಾಡಿದರು. ಪ್ರಸ್ತಾವಿಕವಾಗಿ ಡಾ.ಬಿ.ಎಂ.ಗುರುನಾಥ್ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಟ್ಟಸ್ವಾಮಿ, ಪ್ರಾಂಶುಪಾಲರಾದ ಹೆಚ್.ಪಿ.ನರಸಿಂಹಮೂರ್ತಿ, ಉಪನ್ಯಾಸಕರಾದ ಮೋಹನ್, ಶ್ರೀಮತಿ ಚಂಪಕಲಾ, ಶ್ರೀನಿವಾಸ, ದೊಡ್ಡಪ್ಪ, ಹೇಮಂತರಾಜ್ ಉಪಸ್ಥಿತರಿದ್ದರು.

 

Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement