‘ನಕ್ಸಲರಿಗೆ ಶರಣಾದ ಸರಕಾರ’- ಛಲವಾದಿ ನಾರಾಯಣಸ್ವಾಮಿ

WhatsApp
Telegram
Facebook
Twitter
LinkedIn

ಚಿತ್ರದುರ್ಗ : ನಕ್ಸಲರು ಶರಣಾದುದಲ್ಲ; ಸರಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. 20-25 ವರ್ಷಗಳಿಂದ ಯಾರಿಗೂ ಸಿಗದೇ ಇರುವವರು ಇವತ್ತು ನಿಮ್ಮ ಕೈಗೆ ಹೇಗೆ ಸಿಕ್ಕಿದರು? ವಿಕ್ರಂ ಗೌಡ ಸಾವಾದ ತಕ್ಷಣ ಉಳಿದವರೆಲ್ಲರಿಗೆ ಭಯ ಬಂತೇ? ಇದರ ಹಿಂದೆ ಒಂದು ಪಿತೂರಿ ಇದೆ ಎಂದು ಆರೋಪಿಸಿದರು.

ನಕ್ಸಲರು ಬರಿಗೈಯಲ್ಲಿ ಬಂದಿದ್ದಾರೆ. ಶಸ್ತ್ರಾಸ್ತ್ರಗಳು ಎಲ್ಲಿ ಹೋದವು? ಇವರು ಇಷ್ಟೇನಾ? ಇನ್ನೂ ಇದ್ದಾರಾ? ಅಥವಾ ಶಸ್ತ್ರಾಸ್ತ್ರಗಳನ್ನು ಅವರಿಗೆ ಕೊಟ್ಟು ಬಂದಿದ್ದಾರಾ?- ಈ ಥರ ಎಲ್ಲ ಪ್ರಶ್ನೆಗಳಿವೆ ಎಂದು ತಿಳಿಸಿದರು.

ಕೋರ್ಟ್ ಅಥವಾ ಪೊಲೀಸರ ಮುಂದೆ ಅವರನ್ನು ಶರಣಾಗಲು ಸೂಚಿಸಬೇಕಿತ್ತು. ಮುಖ್ಯಮಂತ್ರಿಗಳ ಮುಂದೆ ಶರಣಾಗತಿ ಮಾಡಲು ಅವರಿಗೂ ಇವರಿಗೂ ಸಂಬಂಧ ಇತ್ತೇ ಎಂದು ಕೇಳಿದರು.
ಈ ಸರಕಾರ ಸಂಪೂರ್ಣವಾಗಿ ಭ್ರಷ್ಟರ ರಕ್ಷಣೆ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಇವರೂ ಇದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ; ನಾನು ಮುಖ್ಯಮಂತ್ರಿನಾ ನೀನಾ ಎಂಬ ಪರಿಸ್ಥಿತಿ ರಾಜ್ಯದ್ದು ಎಂದು ಆರೋಪಿಸಿದರು.ಯಾರೂ ಊಟಕ್ಕೂ ಒಟ್ಟಿಗೆ ಸೇರಬಾರದೆಂಬ ಬ್ರಿಟಿಷರು ಒಡೆದಾಳುವ ನೀತಿ ಕಾಂಗ್ರೆಸ್ಸಿನದು ಎಂದು ಟೀಕಿಸಿದರು.

ದಲಿತ ಮಾಫಿಯ, ದಲಿತ ವಿರೋಧಿ ಮಾಫಿಯ
ಇಲ್ಲೊಂದು ದಲಿತ ಮಾಫಿಯ, ದಲಿತ ವಿರೋಧಿತನ ಇದೆ. ಖರ್ಗೆಯವರ ಕುಟುಂಬ, ಕೆ.ಎಚ್.ಮುನಿಯಪ್ಪ ಅವರ ಕುಟುಂಬ, ಎಚ್.ಸಿ.ಮಹದೇವಪ್ಪ ಅವರ ಕುಟುಂಬ- ಈ ಫ್ಯಾಮಿಲಿಗಳೇ ಇಡೀ ಕಾಂಗ್ರೆಸ್ಸನ್ನು ಆಳುತ್ತಿವೆ. ಇದರಲ್ಲಿ ಬೇರೆಯವರಿಗೆ ಅವಕಾಶವೇ ಇಲ್ಲ; ಇದುವೇ ದಲಿತ ಮಾಫಿಯ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon