ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಬಸವಣ್ಣನ ಡಿಂಗರಿಗನಯ್ಯಾ,
ಚನ್ನಬಸವಣ್ಣನ ಹಳೆಯನಯ್ಯಾ,
ಪ್ರಭುದೇವರ ಬಂಟನಯ್ಯಾ,
ಮಡಿವಾಳಯ್ಯನ ಲೆಂಕನಯ್ಯಾ,
ಸಿದ್ಭರಾಮಯ್ಯನ ಭೃತ್ಯನಯ್ಯಾ.
ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು,
ಬದುಕಿದೆನಯ್ಯಾ.
ಕಾಮಧೂಮ ಧೂಳೇಶ್ವರಾ.
ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ,
ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.
-ಮಾದಾರ ಧೂಳಯ್ಯ

































