ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ(TET) ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ದೇಶಾದ್ಯಂತ ಶಿಕ್ಷಕರಲ್ಲಿ ಆತಂಕ ಹುಟ್ಟುಹಾಕಿದೆ. ಶಾಲಾ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಶಿಕ್ಷಕರ ಸೇವೆಯನ್ನು ಮುಂದುವರಿಸಲು ಹಾಗು ಅವರಿಗೆ ಬಡ್ತಿ ನೀಡಲು TET ಪರೀಕ್ಷೆ ಕಡ್ಡಾಯ ಎಂದು SC ತಿಳಿಸಿದೆ.
ಈಗಾಗಲೇ ಸೇವೆಯಲ್ಲಿರುವ TET ಅಲ್ಲದ ಶಿಕ್ಷಕರಿಗೆ ಸದ್ಯಕ್ಕೆ ಸಮಾಧಾನಕರ ಸುದ್ದಿ ನೀಡಿರುವ ಕೋರ್ಟ್, ಈ ಪರೀಕ್ಷೆ ಪಾಸ್ ಮಾಡಲು ನೀಡಿದ್ದ ಗಡುವನ್ನು ಆ, 31ರವರೆಗೆ ವಿಸ್ತರಿಸಿದೆ.






























