ಇಂದಿನಿಂದ ದುಬಾರಿ ದುನಿಯಾ ಎಂದು ಹಲವು ವರದಿಗಳು ಬರುತ್ತಿದ್ದು, ಈ ನಡುವೆ ತೈಲ ಕಂಪನಿಗಳಿಂದ ಗುಡ್ ನ್ಯೂಸ್ ಕೇಳಿ ಬಂದಿದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಪರಿಷ್ಕೃತ ದರಗಳು ಮಂಗಳವಾರದಿಂದಲೇ ಜಾರಿಗೆ ಬರಲಿವೆ.19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ 41 ರೂ. ಇಳಿಕೆಯಾಗಿದೆ. ಹೊಸ ದರಗಳು ಮಂಗಳವಾರದಿಂದಲೇ ಜಾರಿಗೆ ಬರಲಿವೆ.
19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆಯಾಗಿದ್ದು, ಈ ಹಿನ್ನೆಲೆ ನವದೆಹಲಿಯಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ನ ಚಿಲ್ಲರೆ ಮಾರಾಟ ಬೆಲೆ 1762 ರೂ. ಆಗಿದೆ. ಇದಕ್ಕೂ ಮೊದಲು ಫೆಬ್ರವರಿ 1 ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 7 ರೂ. ನಷ್ಟು ಕಡಿಮೆ ಮಾಡಲಾಗಿತ್ತು.
- ಮುಂಬೈ – 1,713 ರೂ.
- ಬೆಂಗಳೂರು: 1,836 ರೂ.
- ಚೆನ್ನೈ: 1,921 ರೂ.
- ಹೈದರಾಬಾದ್: 1,985 ರೂ.
- ಕೋಲ್ಕತ್ತಾ: 1,868 ರೂ.
ಈ ಮಧ್ಯೆ, ಜಾಗತಿಕ ಕಚ್ಚಾ ತೈಲ ದರಗಳಲ್ಲಿನ ಬದಲಾವಣೆಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ತೈಲ ಕಂಪನಿಗಳು ನಿಯಮಿತವಾಗಿ ಎಲ್ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ಪರಿಷ್ಕರಣೆಯಲ್ಲಿ ಮನೆಯ ಅಡುಗೆಗೆ ಬಳಸುವ ಗೃಹಬಳಕೆಯ LPG ಸಿಲಿಂಡರ್ಗಳ ಬೆಲೆಗಳುಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.