ದಾವಣಗೆರೆ; ಜಿಲ್ಲಾ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 42 ಅಂಗನವಾಡಿ ಕಾರ್ಯಕರ್ತೆ ಮತ್ತು 45 ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಭರ್ತಿ ಮಾಡಲು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ-11, ಹರಿಹರ-5, ಜಗಳೂರು-6, ಹೊನ್ನಾಳಿ-6, ನ್ಯಾಮತಿ-4 ಹಾಗೂ ಚನ್ನಗಿರಿ-10 ಒಟ್ಟು 42 ಅಂಗನವಾಡಿ ಕಂ ಕ್ರμï ಕೇಂದ್ರಗಳಿಗೆ ಕಾರ್ಯಕರ್ತೆ ಮತ್ತು ದಾವಣಗೆರೆ-14, ಹರಿಹರ-5, ಜಗಳೂರು-6, ಹೊನ್ನಾಳಿ-6, ನ್ಯಾಮತಿ-4 ಹಾಗೂ ಚನ್ನಗಿರಿ-10 ಒಟ್ಟು 45 ಸಹಾಯಕಿಯರ ಹುದ್ದೆಗಳಿದ್ದು, ಅಭ್ಯರ್ಥಿಗಳು ಉಪನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು, ಅಗತ್ಯ ದಾಖಲೆಗಳೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಉಪನಿರ್ದೇಶಕರ ಕಛೇರಿಯಲ್ಲಿನ ಟೆಂಡರ್ ಬಾಕ್ಸ್ ನಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ, ಕಛೇರಿ ದೂರವಾಣಿ ಸಂಖ್ಯೆ:-08192-264056 ಸಂಪರ್ಕಿಸಲು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
































