16,925 SSK ಯೋಜನೆಯಡಿ ಬೋಧಕ ಮತ್ತು ಬೋಧಕೇತರಿಗೆ ಗುಡ್ ನ್ಯೂಸ್ .!

WhatsApp
Telegram
Facebook
Twitter
LinkedIn

 

ಬೆಂಗಳೂರು: ರಾಜ್ಯದಲ್ಲಿ ‘ಸಮಗ್ರ ಶಿಕ್ಷಣ ಕರ್ನಾಟಕ’ (SSK) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು 2026-27ನೇ ಆರ್ಥಿಕ ಸಾಲಿಗೆ ಮುಂದುವರಿಸಲು ಕರ್ನಾಟಕ ಸರ್ಕಾರವು ಮಹತ್ವದ ಅನುಮೋದನೆ ನೀಡಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶೇಷಾಧಿಕಾರಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ (ಯೋಜನೆ) ಶುಭಮಂಗಳ ಆರ್.ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯ, ಜಿಲ್ಲಾ, ತಾಲೂಕು ಮತ್ತು ವಲಯ ಮಟ್ಟದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಒಟ್ಟು 16,925 ಸಿಬ್ಬಂದಿಗಳಿಗೆ ನಿರಾಳತೆಯಾಗಿದೆ.

ಹುದ್ದೆಗಳ ವಿವರ ಹೀಗಿದೆ:

ರಾಜ್ಯ ಯೋಜನಾ ನಿರ್ದೇಶಕರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಗಿನಂತೆ ವಿವಿಧ ಹಂತದ ಹುದ್ದೆಗಳ ಮುಂದುವರಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ:

ರಾಜ್ಯ ಕಚೇರಿ ಹುದ್ದೆಗಳು: 76

ಜಿಲ್ಲಾ ಕಚೇರಿ ಹುದ್ದೆಗಳು: 370

ವಲಯ (ತಾಲೂಕು) ಕಚೇರಿ ಹುದ್ದೆಗಳು: 15,105

ಡಿ.ಪಿ.ಐ.ಪಿ. ಗುತ್ತಿಗೆ ಹುದ್ದೆಗಳು: 75

ಹೊರಗುತ್ತಿಗೆ ಆಧಾರದ ಹುದ್ದೆಗಳು (ರಾಜ್ಯ, ಜಿಲ್ಲಾ ಮತ್ತು ವಲಯ): 1,292

ನೇರ ಗುತ್ತಿಗೆ ಹುದ್ದೆಗಳು: 7

ಒಟ್ಟು ಮುಂದುವರಿದ ಹುದ್ದೆಗಳು: 16,925

ಗಮನಾರ್ಹ ಅಂಶ: 2026-27ನೇ ಸಾಲಿನಲ್ಲಿ ಡಿ.ಪಿ.ಐ.ಪಿ. ವಿಭಾಗದ 19 ಸಿಬ್ಬಂದಿಗಳು 60 ವರ್ಷಗಳ ವಯೋಮಿತಿಯನ್ನು ಪೂರ್ಣಗೊಳಿಸಿ ಸೇವೆಯಿಂದ ಬಿಡುಗಡೆ ಹೊಂದಿದ್ದರಿಂದ, ಸದರಿ 19 ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆಂತರಿಕ ಮರುಹಂಚಿಕೆಗೆ ಮುಕ್ತ ಅಧಿಕಾರ

ಅಗತ್ಯಕ್ಕೆ ಅನುಗುಣವಾಗಿ ಬ್ಲಾಕ್ (ತಾಲೂಕು) ಕಚೇರಿಗಳಿಗೆ ಹಾಗೂ ಡಿ.ಪಿ.ಐ.ಪಿ. ಹುದ್ದೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಅಥವಾ ಹೊಸದಾಗಿ ಸೃಜನೆಯಾಗಿರುವ ಜಿಲ್ಲೆಗಳಿಗೆ ಹಾಲಿ ಇರುವ ಹುದ್ದೆಗಳನ್ನು ಆಂತರಿಕವಾಗಿ ಮರುಹಂಚಿಕೆ ಮಾಡುವ ಸಂಪೂರ್ಣ ಅಧಿಕಾರವನ್ನು ‘ಸಮಗ್ರ ಶಿಕ್ಷಣ ಕರ್ನಾಟಕ’ದ ರಾಜ್ಯ ಯೋಜನಾ ನಿರ್ದೇಶಕರಿಗೆ ನೀಡಲಾಗಿದೆ.

 

ರಾಜ್ಯ ಯೋಜನಾ ನಿರ್ದೇಶಕರು ಇಲಾಖಾವಾರು, ಕಚೇರಿವಾರು ಹಾಗೂ ಗೌರವ ಸಂಭಾವನೆವಾರು ತಾತ್ಕಾಲಿಕ ಹುದ್ದೆಗಳ ಘೋಷಣಾಪಟ್ಟಿಯನ್ನು 2026ರ ಜುಲೈ 15ರ ಒಳಗಾಗಿ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸರ್ಕಾರವು ಗಡುವು ವಿಧಿಸಿದೆ. ಈ ಹುದ್ದೆಗಳ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಮೋದಿಸಲ್ಪಟ್ಟ ವೆಚ್ಚದ ಮಿತಿಯೊಳಗೇ ಭರಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon