ಚಿತ್ರದುರ್ಗ: ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ವತಿಯಿಂದ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ ಯಲ್ಲಿರುವ ಶ್ರೀ ಮುಕ್ತಿನಾಥೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಸಾರ್ವಜನಿಕ ಹಿಂದೂ ರುದ್ರ ಭೂಮಿ ಸೇವಾ ಸಮಿತಿ ಟ್ರಸ್ಟ್ ಇವರಿಗೆ ಮುಕ್ತಿವಾಹನವನ್ನು ಸಾರ್ವಜನಿಕ ರ ಉಪಯೋಗಕ್ಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್.ವಿ.ಗುರುಮೂರ್ತಿ ಯವರ ಹಿರಿಯ ಸಹೋದರರಾದ ವಿ.ಎಸ್. ಕುಬೇರ್ ರವರು ಮಾತನಾಡಿ, ಗಂಡು ಮೆಟ್ಟಿನ ನಾಡು ಚಿತ್ರದುರ್ಗ ದಲ್ಲಿ ಐತಿಹಾಸಿಕ ಸಾರ್ವಜನಿಕ ರುದ್ರಭೂಮಿ ಯನ್ನು ಅಭಿವೃದ್ಧಿ ಪಡಿಸಿ, ಇಂತಹ ಸತ್ಕಾರ್ಯ ಗಳನ್ನು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದನ್ನು ಶ್ಲಾಘಿಸಿ, ಇಂತಹ ಸಂಸ್ಥೆಗಳಲ್ಲಿರುವವರು ಒಗ್ಗಟ್ಟಿನಿಂದ ಕೆಲಸ ಕಾರ್ಯಗಳನ್ನು ಮಾಡಿ,ಟ್ರಸ್ಟಿನ ಪದಾಧಿಕಾರಿಗಳಿಗೆ ಕಿವಿಮಾತು ತಿಳಿಸಿದರು.
ನಗರದ ಸಾರ್ವಜನಿಕರಿಗೆ ಸದುಪಯೋಗ ವಾಗಲೆಂದು ತಿಳಿಸಿ, ಶುಭ ಹಾರೈಸಿ, ಟ್ರಸ್ಟಿನ ಅದ್ಯಕ್ಷರಾದ ಶ್ರೀ ಈ.ಅಶೋಕ್ ಕುಮಾರ್ ರವರಿಗೆ ಮುಕ್ತಿವಾಹನದ ಕೀ ಅನ್ನು ಹಸ್ತಾಂತರಿಸಿದರು ಇದೇ ಸಂದರ್ಭದಲ್ಲಿ ಟ್ರಸ್ಟಿನ ಗೌರವಾದ್ಯಕ್ಷರಾದ ಎಸ್.ವಿ.ಗುರುಮೂರ್ತಿ, ಉಪಾಧ್ಯಕ್ಷರಾದ ವೆಂಕಟೇಶ್ ಬಾಬು, ಕೋಶಾದ್ಯಕ್ಷರಾದ ಸೋಮಪ್ಪ ಟ್ರಸ್ಟಿಗಳಾದ ದೀನೇಶ್, ಮಂಜುನಾಥ್, ಮೋಹನ್,ವಿಜಯಕುಮಾರ್ ಅರ್ಚಕ ಗುಂಡ ಉಪಸ್ಥಿತಿ ಇದ್ದರು.































