ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಅಯ್ಯಾ, ನಾನು ಹುಟ್ಟಿದಂದಿಂದ ಲಿಂಗವನಲ್ಲದೆ ಆರಾಧಿಸೆ.
ಜಂಗಮಕ್ಕಲ್ಲದೆ ನೀಡೆ, ಶರಣಸಂಗವಲ್ಲದೆ ಮಾಡೆ.
ಕಲ್ಯಾಣದ ಮಹಾಗಣಂಗಳೊಂದು ಹೊಳೆಯ ಮಾಡಿಕೊಟ್ಟರು.
ಆ ಹೊಳೆಯಲ್ಲಿ ಹೆಣ್ಣು ಗಂಡು ಸುಳಿಯಲೀಯೆನು.
ಚಿಕ್ಕವರು ಹಿರಿಯರ ಸುಳಿಯಲೀಯೆನು.
ಎಲ್ಲಾ ಮಹಾಗಣಂಗಳು ಎನ್ನ ಹೊಳೆಯಲೆ ಹಾಯುವರು.
ಲಿಂಗದ ವಸ್ತ್ರವನೊಗೆದು ಕಾಯಕದಲ್ಲಿ ಶುದ್ಧನಾದೆನು.ಎನ್ನ ಕಾಯಕವನವಧರಿಸು ಕಲಿದೇವಯ್ಯಾ.
-ಮಡಿವಾಳ ಮಾಚಿದೇವ
































