ಮಾರುತಿ ನಗರದಲ್ಲಿ ನಡೆದ 71 ನೇ ಕನ್ನಡ ರಾಜ್ಯೋತ್ಸವ ಝಲಕ್.!
ಚಿತ್ರದುರ್ಗ : ಹರಿದು ಹಂಚಿ ಹೋಗಿದ್ದ ಪ್ರದೇಶವನ್ನು ಒಂದುಗೂಡಿಸಲು ಅನೇಕ ಹಿರಿಯರ ತ್ಯಾಗ ಬಲಿದಾನವಿದೆ ಎಂದು ವಿನಾಯಕ ಕ್ಷೇಮಾಭಿವೃದ್ದಿ ಸಂಘದ ಸಂಘಟನಾ ಕಾರ್ಯದರ್ಶಿ ಟಿ.ರಾಮಾಂಜನೇಯ ತಿಳಿಸಿದರು.
ಹತ್ತೊಂಬತ್ತನೆ ವಾರ್ಡ್ ಮಾರುತಿ ನಗರದಲ್ಲಿ ವಿನಾಯಕ ಕ್ಷೇಮಾಭಿವೃದ್ದಿ ಸಂಘದಿಂದ ಶನಿವಾರ ನಡೆದ 71 ನೇ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡಾಂಭೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ದಿನನಿತ್ಯದ ಜೀವನದಲ್ಲಿ ಕನ್ನಡ ಬಳಕೆಯಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಮೂಡಿಸಿಕೊಳ್ಳಬೇಕು. ದಿವಂಗತ ಡಿ.ದೇವರಾಜ ಅರಸುರವರು 1973 ರಲ್ಲಿ ಕರ್ನಾಟಕವೆಂದು ನಾಮಕರಣ ಮಾಡಿದರು.
ಹೈದರಾಬಾದ್, ಮುಂಬೈ ಪ್ರದೇಶಗಳಲ್ಲಿ ಸೇರಿಕೊಂಡಿದ್ದ ನಮ್ಮ ನಾಡಿನ ಪ್ರದೇಶವನ್ನೆಲ್ಲಾ ಒಟ್ಟುಗೂಡಿಸುವಲ್ಲಿ ಹಿರಿಯರ ಹೋರಾಟ, ಪರಿಶ್ರಮವಿದೆ ಎಂದು ಸ್ಮರಿಸಿದರು.
ತಿರುಮಲಯ್ಯ, ನೂರುಲ್ಲಾ, ವೆಂಕಟೇಶ್ರೆಡ್ಡಿ, ದಿನೇಶ್, ಜನಾರ್ಧನರೆಡ್ಡಿ, ಭಾಷಸಾಬ್, ಕೆ.ಎಂ.ವಿನಾಯಕ, ವೆಂಕಟೇಶ್, ಮದನ್, ತಿಪ್ಪೇಶ್, ಕಾರ್ತಿಕ್, ಜಗದೀಶ್
ರಬ್ಬನ್ ಇನ್ನು ಅನೇಕರು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.