LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಉದ್ಯಾನವನ ಹಾಗೂ ಖಾಲಿ ಜಾಗವನ್ನು ನಿವೇಶನಗಳನ್ನ ಸೃಷ್ಟಿಸಿ ಪರಬಾರೆ ಮಾಡಿದ  ಪಿಡಿಒಅಮಾನತು..!

ಉದ್ಯಾನವನ ಹಾಗೂ ಖಾಲಿ ಜಾಗವನ್ನು ನಿವೇಶನಗಳನ್ನ ಸೃಷ್ಟಿಸಿ ಪರಬಾರೆ ಮಾಡಿದ  ಪಿಡಿಒಅಮಾನತು..!

ಉದ್ಯಾನವನ ಹಾಗೂ ಖಾಲಿ ಜಾಗವನ್ನು ನಿವೇಶನಗಳನ್ನ ಸೃಷ್ಟಿಸಿ ಪರಬಾರೆ ಮಾಡಿದ  ಪಿಡಿಒಅಮಾನತು..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಪ್ತಿಗೆ ಸೇರಿದ ಉದ್ಯಾನವನ ಹಾಗೂ ಖಾಲಿ ಜಾಗ, ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಇ-ಸ್ವತ್ತು ಖಾತೆಗಳ ಮಾಡಿದ   ಗ್ರಾಮ ಪಂಚಾಯಿತಿ ಪಿಡಿಒ ಎ. ಭಾಗ್ಯಲಕ್ಷ್ಮಿ ಅಮಾನತು ಆಗಿದ್ದಾರೆ.

ಬಾಗೇಪಲ್ಲಿ ವಕೀಲ ಎನ್‌. ನಾಗಭೂಷಣ್ ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಅನುಮೋದಿತ ನಕ್ಷೆಯಲ್ಲಿ ಕೇವಲ 17 ನಿವೇಶನಗಳಿಗೆ ಅವಕಾಶವಿದ್ದರೂ, ಪಾರ್ಕ್‌ಗೆ (Park) ಮೀಸಲಿಟ್ಟ ಜಾಗದಲ್ಲಿ ಹೆಚ್ಚುವರಿಯಾಗಿ 6 ನಿವೇಶನಗಳನ್ನ ಸೃಷ್ಟಿಸಿ ಇ-ಸ್ವತ್ತು ವಿತರಿಸಿರುವುದು ಪತ್ತೆಯಾಗಿದೆ.

ಅಲ್ಲದೇ, ಅಗತ್ಯ ದಾಖಲೆಗಳನ್ನ ಪರಿಶೀಲಿಸದೇ ಸುಮಾರು 14 ಇ-ಸ್ವತ್ತುಗಳಿಗೆ ಮ್ಯುಟೇಷನ್ ಮಾಡಿರುವುದು ಹಾಗೂ ಭೂ ಪರಿವರ್ತನೆ ಆದೇಶ, ಅನುಮೋದಿತ ಲೇಔಟ್ ನಕ್ಷೆ ಇಲ್ಲದೆ ಇ-ಸ್ವತ್ತು ವಿತರಿಸಿರುವ ಲೋಪಗಳೂ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಈ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ, ಪಿಡಿಒ ಸಲ್ಲಿಸಿದ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಪರಿಗಣಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ ನವೀನ್ ಭಟ್‌ ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.

ಅಮಾನತು ಅವಧಿಯಲ್ಲಿ ಭಾಗ್ಯಲಕ್ಷ್ಮಿ ಅವರ ಲೀನ್ ಅನ್ನು ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉದ್ಯಾನವನ ಹಾಗೂ ಖಾಲಿ ಜಾಗವನ್ನು ನಿವೇಶನಗಳನ್ನ ಸೃಷ್ಟಿಸಿ ಪರಬಾರೆ ಮಾಡಿದ  ಪಿಡಿಒಅಮಾನತು..!ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯ ಸರಕ್ಕೆ 12 ವರ್ಷಗಳ ಆಡಳಿತದಲ್ಲಿ ಎಷ್ಟು ಹಣ ನೀಡಲಾಗಿದೆ ಶ್ವೇತ ಪತ್ರಕ್ಕೆ ಆಗ್ರಹ.!ಮಾರುತಿ ನಗರದಲ್ಲಿ ನಡೆದ 71 ನೇ ಕನ್ನಡ ರಾಜ್ಯೋತ್ಸವ ಝಲಕ್.!ಓದುವ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ವಿವಾಹ ಮಾಡಿದರೆ ಶಿಕ್ಷಾರ್ಹ.! ನಾ. ಹೆಚ್.ಅಣ್ಣಪ್ಪಸ್ವಾಮಿ29-11-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ-ಕೋಲ ಶಾಂತಯ್ಯ ಅವರ ವಚನ .!ಪುರಾತನ ಕೊಳ್ಳೆಗಾಲದ ವಶೀಕರಣ ತಂತ್ರ ಇಷ್ಟಾರ್ಥ ಕಾರ್ಯ ಸಿದ್ದಿಗಾಗಿ ಮಾಡಿ ನೋಡಿ!ದಾಸ ಸಾಹಿತ್ಯದ ಮೂಲಕ ಜನಸಾಮಾನ್ಯರನ್ನು ತಲುಪಿದ ಕನಕದಾಸರು : ಸಚಿವ ಟಿ.ರಘುಮೂರ್ತಿದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 28-11-2026ಭಕ್ತಕನಕದಾಸರ 539 ನೇ ಜಯಂತಿ: ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಜಿಲ್ಲಾಧಿಕಾರಿ ಎಸ್.ರಮ್ಯ.!