ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರತಿ ಭೇಟಿ ಗೌರವಧನದ ಆಧಾರದ ಮೇಲೆ ಅತಿ ವಿಶೇಷಜ್ಞ ವೈದ್ಯ ಸಲಹೆಗಾರರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ನೆರೆಯ ಜಿಲ್ಲೆಗಳನ್ನು ಅವಲಂಬಿಸುವುದನ್ನು ತಪ್ಪಿಸಲು ಹಾಗೂ ರೋಗಿಗಳಿಗೆ ಉಂಟಾಗುವ ಭಾರಿ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅತಿ ವಿಶೇಷಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು, ಸಂಸ್ಥೆಯ 5ನೇ ಹಣಕಾಸು ಸಮಿತಿ ಸಭೆಯ ನಡವಳಿಗಳಲ್ಲಿ ಅನುಮೋದನೆ ನೀಡಲಾಗಿದೆ.
ಭೇಟಿ ಅಥವಾ ಸಮಾಲೋಚನೆ ಆಧಾರದಲ್ಲಿ ಹೃದ್ರೋಗ ತಜ್ಞರು (Cardiologist), ನರವಿಜ್ಞಾನಿ (Neurologist), , ನರಶಸ್ತ್ರಚಿಕಿತ್ಸಕ (Neurosurgeon), ಮೂತ್ರ ಪಿಂಡಶಾಸ್ತ್ರಜ್ಞ (Nephrologist), ನವಜಾತ ಶಿಶು ತಜ್ಞರು (Neonatologist) ಕ್ಯಾನ್ಸರ್ ತಜ್ಞರು (Oncologist), ಕ್ಯಾನ್ಸರ್ ಶಸ್ತ್ರಚಿಕಿತ್ಸಕರು (Surgical Oncologist), ಮನೋವೈದ್ಯರು (Psychiatrist) ಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಪ್ರತಿದಿನದ ಭೇಟಿಗೆ ರೂ. 10,000 ಗೌರವಧನ ನೀಡಲಾಗುವುದು. ತಿಂಗಳಿಗೆ ಕನಿಷ್ಠ 4 ಭೇಟಿಗಳು ಕಡ್ಡಾಯವಾಗಿದೆ. ಸಾಂಸ್ಥಿಕ ನಿಯಮಗಳ ಪ್ರಕಾರ ಕಾರ್ಯಕ್ಷಮತೆ ಆಧಾರಿತ ಪೆÇ್ರೀತ್ಸಾಹಧನ ನೀಡಲಾಗುವುದು. ಮೊದಲ ಬಂದವರಿಗೆ ಮೊದಲ ಆದ್ಯತೆ ಮೇಲೆ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ.
ಆಸಕ್ತ ಹಾಗೂ ಅರ್ಹ ವೈದ್ಯಕೀಯ ತಜ್ಞರು ತಮ್ಮ ವಿವರವಾದ ಬಯೋಡಾಟಾ ವಿದ್ಯಾರ್ಹತೆ ಮತ್ತು ಅನುಭವದ ಪ್ರಮಾಣಪತ್ರಗಳೊಂದಿಗೆ ಇಮೇಲ್ ವಿಳಾಸ [email protected] ಹಾಗೂ [email protected] ಅರ್ಜಿ ಕಳುಹಿಸಬಹುದು.
ರೋಗಿ-ಕೇಂದ್ರಿತ ಆರೋಗ್ಯ ಸೇವೆಯನ್ನು ಸುಧಾರಿಸುವ ಹಾಗೂ ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ಅತ್ಯುತ್ತಮ ಚಿಕಿತ್ಸೆ ಕಲ್ಪಿಸುವ ಉದ್ದೇಶದಿಂದ ಈ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ.ವೈ.ಯುವರಾಜ್ ತಿಳಿಸಿದ್ದಾರೆ.