LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಚಿತ್ರದುರ್ಗ: ಇಂದು ಆ. 11ರಂದು ಸಿಎಂ ಜೊತೆ ಸರ್ಕಾರಿ ನೌಕರರ ಸಂವಾದ.!

ಚಿತ್ರದುರ್ಗ: ಇಂದು ಆ. 11ರಂದು ಸಿಎಂ ಜೊತೆ ಸರ್ಕಾರಿ ನೌಕರರ ಸಂವಾದ.!

 

ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಸರ್ಕಾರಿ ನೌಕರರೊಂದಿಗೆ ಇದೇ ಆಗಸ್ಟ್ 11ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಆನ್‍ಲೈನ್ ಮೂಲಕ ನೇರ ಸಂವಾದ ನಡೆಸಲಿದ್ದಾರೆ.

ಈ ಸಂವಾದಕ್ಕಾಗಿ ಜಿಲ್ಲೆಯ ವಿವಿಧೆಡೆ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಹಾಜರಾಗಬೇಕು. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಹೋಬಳಿ ಮಟ್ಟದ ಸರ್ಕಾರಿ ನೌಕರರು ಬಸವೇಶ್ವರ ಕಲ್ಯಾಣ ಮಂಟಪ, ಹಿರೇಗುಂಟನೂರು ಹೋಬಳಿಯವರು ಬೊಮ್ಮೇನಹಳ್ಳಿಯ ಶ್ರೀ ಯೋಗಿ ನಾರಾಯಣ ಕಲ್ಯಾಣ ಮಂಟಪ ಹಾಗೂ ತುರುವನೂರು ಹೋಬಳಿಯವರು ತುರುವನೂರಿನ ಡಿಗ್ರಿ ಕಾಲೇಜಿನ ಹೊಸ ಕಟ್ಟಡದಲ್ಲಿ ಹಾಜರಾಗಬೇಕು. 

ಹಿರಿಯೂರಿನಲ್ಲಿ ನಗರಸಭೆ ಸಭಾಂಗಣ (ತಾಲ್ಲೂಕು ಕೇಂದ್ರ), ಧರ್ಮಪುರ ಹಾಗೂ ಐಮಂಗಲದ ಗ್ರಾಮ ಪಂಚಾಯತಿ ಆವರಣ ಮತ್ತು ಜೆ.ಜಿ. ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಹೊಸದುರ್ಗದಲ್ಲಿ ಹಳೇ ನ್ಯಾಯಾಲಯ (ತಾಲ್ಲೂಕು ಕೇಂದ್ರ), ಮಾಡದಕೆರೆಯ ಶ್ರೀ ಹಾಲುರಾಮೇಶ್ವರ ಸಭಾ ಭವನ, ಶ್ರೀರಾಂಪುರದ ಡಾ.ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಮತ್ತೋಡಿನ ಶ್ರೀ ಬನಶಂಕರಿ ಕಲ್ಯಾಣಿ ಮಂಟಪ ನಿಗದಿಪಡಿಸಲಾಗಿದೆ.

ಹೊಳಲ್ಕೆರೆಯಲ್ಲಿ ಶಿವಮೊಗ್ಗ ರಸ್ತೆಯ ವಾಲ್ಮೀಕಿ ಸಮುದಾಯ ಭವನ (ತಾಲ್ಲೂಕು ಕೇಂದ್ರ), ಚಿಕ್ಕಜಾಜೂರು ಸಮುದಾಯ ಭವನ, ರಾಮಗಿರಿ ಹೋಬಳಿಯವರು ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಮುದಾಯ ಭವನ ಹಾಗೂ ತಾಳ್ಯ ಹೋಬಳಿಯವರು ಹೊರಕೆರೆದೇವರಪುರ ಯಾತ್ರಿ ನಿವಾಸದಲ್ಲಿ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ.

 ಮೊಳಕಾಲ್ಮೂರಿನಲ್ಲಿ ತಾಲ್ಲೂಕು ಕಚೇರಿಯ ಕೆ-ಸ್ವಾನ್ ಕೊಠಡಿ (ತಾಲ್ಲೂಕು ಕೇಂದ್ರ) ಹಾಗೂ ರಾಂಪುರದ ಎನ್.ಪಿ.ಎಸ್.ಆರ್. ಪ್ರೌಢಶಾಲೆಯನ್ನು ಗುರುತಿಸಲಾಗಿದೆ. ಚಳ್ಳಕೆರೆಯಲ್ಲಿ ಸರ್ಕಾರಿ ನೌಕರರ ಭವನ (ತಾಲ್ಲೂಕು ಕೇಂದ್ರ), ನಾಯಕನಹಟ್ಟಿ ಒಳಮಠದ ಸಮುದಾಯ ಭವನ, ಪರಶುರಾಂಪುರದ ಶ್ರೀ ವಾಸವಿ ಕನ್ವೆನ್ಷನ್ ಹಾಲ್ ಹಾಗೂ ತಳಕುವಿನ ಜಾಮಿಯಾ ಸಮುದಾಯ ಭವನ ನಿಗದಿಗೊಳಿಸಲಾಗಿದೆ.

ನಿಗಧಿಪಡಿಸಿರುವ ಸಮಯಕ್ಕೆ ಸರಿಯಾಗಿ ಜಿಲ್ಲಾ ಕೇಂದ್ರ, ತಾಲ್ಲೂಕುಕೇಂದ್ರ, ಹೋಬಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಲಾಗಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸೆ.6ರಂದು ಭದ್ರೆ ಆಗಮನಕ್ಕೆ ದುರ್ಗದಲ್ಲಿ ನೀರಾವರಿ ಹೋರಾಟ ಸಮಿತಿ ಸಂಭ್ರಮ ಸಿಹಿ ಹಂಚಿ ಸಡಗರ .!ಮಾಟ ಮಂತ್ರದ ಶಕ್ತಿ ಇರುವ ವಸ್ತುಗಳನ್ನು ದಾರಿಯಲ್ಲಿ ಯಾವುದೇ ಕಾರಣಕ್ಕೂ ತುಳಿಯಬೇಡಿ ಅಕಸ್ಮಾತ್ ತುಳಿದರೆ ಸಮಸ್ಯೆ ಕತ್ತಿಟ್ಟ ಬುತ್ತಿ!ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ.! ಇಲ್ಲಿದೆ ವಿವರದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 05-09-2026ಸೆ.6 ರಿಂದ ಭದ್ರಾ ಮೇಲ್ದಂಡೆ ಯೋಜನೆ ಐತಿಹಾಸಿಕ ಕ್ಷಣ: ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಯಲಿದೆ ನೀರು.!-ಚೆನ್ನಬಸವಣ್ಣ ಅವರ ವಚನ.!‘ಯುವ ದಸರಾ’ ಸಂಭ್ರಮ ಚಾಲನೆಗೆ ನಟ ಪ್ರಭುದೇವ.!ಈ ಕಾರಣಕ್ಕೆ 'ಫೋಕ್ಸ್‌ವ್ಯಾಗನ್' ಸಂಸ್ಥೆಯಲ್ಲಿ 1 ಲಕ್ಷ ಉದ್ಯೋಗಗಳಿಗೆ ಕತ್ತರಿ.!ಕಾಳಿ ಮಂತ್ರದ ಪ್ರಯೋಗ! ಮಹಾಕಾಳಿ ಯಂತ್ರ ಮಂತ್ರ ಸಿದ್ಧಿಯಿಂದ ಆಕರ್ಷಣ ವಶೀಕರಣತಂತ್ರಜ್ಞಾನ ಹಾಗೂ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಿ: -ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್