ಬೆಂಗಳೂರು: ಬಸವಮಂಟಪ ಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಅವಹೇಳನ ಮಾಡಿದ ಆರೋಪದ ಮೇಲೆ ಲೇಖಕ ರವಿ ಹಂಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಲೇಖಕ ರವಿ ಹಂಜ್ ವಿರುದ್ಧ FIR ದಾಖಲಾಗಿದೆ. ಜಾಗತಿಕ ಮಹಾಸಭಾ ಲಿಂಗಾಯತ ಮುಖಂಡರ ದೂರು ಆಧರಿಸಿ FIR ದಾಖಲಿಸಲಾಗಿದ್ದು ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರವಿ ಹಂಜ್ ವಿರುದ್ಧ ಬಸವ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುಸ್ತಕದ ಪ್ರತಿಯನ್ನ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.