ಸ್ಪೇನ್: ಟೊಲೆಡೊ ಪ್ರಾಂತ್ಯದಲ್ಲಿ ಭೀಕರ ಹೈಸ್ಪೀಡ್ ರೈಲು ದುರಂತ ಸಂಭವಿಸಿದ್ದು, ಸಾವಿನ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.
Renfe ಮತ್ತು Iryo ಕಂಪನಿಗಳ 2 ರೈಲುಗಳು ಪರಸ್ಪರ ಡಿಕ್ಕಿಯಾಗಿ, ಈ ಅಪಘಾತ ಸಂಭವಿಸಿದೆ. ಈ ಭೀಕರ ದುರಂತದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ತಾಂತ್ರಿಕ ಹಾಗೂ ಸಿಗ್ನಲಿಂಗ್ ದೋಷವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಘಟನೆಯ ಹಿನ್ನೆಲೆ ಸ್ಪೇನ್ ಸರ್ಕಾರ ದೇಶಾದ್ಯಂತ 3 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.