ನೆದರ್ಲೆಂಡ್ಸ್: ವ್ಯಾಗನರ್ ಕ್ರೀಡಾಂಗಣದಲ್ಲಿ ಮಹಿಳಾ ಹಾಕಿ ವಿಶ್ವಕಪ್ 2026ರ 5ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡವು, ಜರ್ಮನಿ ವಿರುದ್ಧ 3-1 ಗೋಲುಗಳ ಜಯ ಸಾಧಿಸಿದೆ.
ದ್ವಿತೀಯಾರ್ಧದಲ್ಲಿ ಕಮ್‌ಬ್ಯಾಕ್ ಮಾಡಿದ ಭಾರತೀಯ ವನಿತೆಯರು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.
ಈ ಗೆಲುವಿನೊಂದಿಗೆ ಭಾರತವು 1974ರ ಚೊಚ್ಚಲ ವಿಶ್ವಕಪ್‌ನಲ್ಲಿ 4ನೇ ಸ್ಥಾನ ಪಡೆದ ನಂತರ, ಕಳೆದ 52 ವರ್ಷಗಳಲ್ಲೇ ತನ್ನ ಅತ್ಯುತ್ತಮ ವಿಶ್ವಕಪ್ ಸಾಧನೆಯನ್ನು ದಾಖಲಿಸಿದೆ.