ಬೆಂಗಳೂರು: ಕೆಂಧೂಳಿ ಪತ್ರಿಕೆ ಕಳೆದ ವರ್ಷದಿಂದ ನೀಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಹಾಗು ಪತ್ರಕರ್ತ ಶೂದ್ರ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದೆ.
ಕೆಂಧೂಳಿ ವಾರಪತ್ರಿಕೆ ಕಳೆದ ವರ್ಷದಿಂದ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಿದೆ.ಪತ್ರಿಕೆ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನವೆಂಬರ್ 6 - 2019 ರಲ್ಲಿ ಆರಂಭವಾಗಿದ್ದು, ಹೀಗಾಗಿ 'ಕೆಂಧೂಳಿ ರಾಜ್ಯೋತ್ಸವ 'ಹೆಸರಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ
ಈಗ ಪತ್ರಿಕೆ ಆರು ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿರಿಸಿದೆ. ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಸಾಹಿತ್ಯಕ್ಷೇತ್ರ, ಪತ್ರಿಕಾ, ಕೃಷಿ, ಕನ್ನಡ ಚಳವಳಿ,ಸಮಾಜಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರಿಗೆ ಈ ಪ್ರಶಸ್ತಿ ನೀಡಲು ಕೆಂಧೂಳಿ ಬಳಗ ತೀರ್ಮಾನಿಸಿದೆ , ಹೀಗಾಗಿ ಈ ಬಾರಿ ಪತ್ರಕರ್ತರು ಮತ್ತು ಸಾಹಿತಿಗಳು ಆದ ಶೂದ್ರ ಶ್ರೀನಿವಾಸ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲು ಸಮಿತಿ ಹರ್ಷಿಸುತ್ತದೆ.
ಕಳೆದ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ ಖ್ಯಾತ ಸಾಹಿತಿ ಡಾ.ಬಿ.ಎಲ್.ವೇಣು ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು, ಈ ಪ್ರಶಸ್ತಿಯು ೧೦ ಸಾವಿರ ನಗದು, ಆಕರ್ಷಕ ಫಲಕ ಹೊಂದಿರುತ್ತದೆ. ಪ್ರಶಸ್ತಿ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುತ್ತದೆ.
ಖ್ಯಾತ ಸಾಹಿತಿ ಡಾ.ಬಿ.ಎಲ್.ವೇಣು ಅವರ ಅಧ್ಯಕ್ಷತೆಯಲ್ಲಿ.ಸಾಹಿತಿ ಡಾ.ಶಿವಕುಮಾರ್ ಕಂಪ್ಲಿ, ಶ್ರೀದೇವಿ ಕೆರೆಮನೆ ಹಾಗೂ ಡಾ.ಗುರುದೇವ್ ಎಸ್.ಎ. ಅವರನ್ನೊಳಗೊಂಡ ಸಮತಿಯು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಶೂದ್ರ ಶ್ರೀನಿವಾಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.