LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಸೆಪ್ಟೆಂಬರ್ 30ರಂದು `ಮಾದಿಗ ಮುನ್ನಡೆ-2' ಜಿಲ್ಲಾ ಸಮಾವೇಶ:

ಸೆಪ್ಟೆಂಬರ್ 30ರಂದು `ಮಾದಿಗ ಮುನ್ನಡೆ-2' ಜಿಲ್ಲಾ ಸಮಾವೇಶ:

 

ಚಿತ್ರದುರ್ಗ: ಕಳೆದ ನಾಲ್ಕೈದು ದಶಕಗಳಿಂದ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಸಕ್ರಿಯವಾಗಿ ಹೋರಾಡು ತ್ತಿದ್ದು, ಕಾಂಗ್ರೆಸ್ ಸರ್ಕಾರಗಳು ಇದನ್ನು ಕೇವಲ ಮತಬ್ಯಾಂಕ್ ಆಗಿ ದುರುಪಯೋಗಪಡಿಸಿಕೊಂಡು ಸಮುದಾಯಕ್ಕೆ ವಂಚಿಸಿವೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಆರೋಪಿಸಿದರು. 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯು ಅಪೂರ್ಣವಾಗಿದ್ದು, 15 ಹುದ್ದೆಗಳಿಗಿಂತ ಕಡಿಮೆ ಇರುವಲ್ಲಿ ಒಳಮೀಸಲಾತಿ ಅನ್ವಯಿಸದಿರುವುದು ಹಾಗೂ ಬಡ್ತಿಯಲ್ಲಿ ಒಳಮೀಸಲಾತಿ ನೀಡದಿರುವುದು ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ. ಎಸ್. ಯಡಿಯೂರಪ್ಪ ಅವರು ಸದಾಶಿವ ಆಯೋಗಕ್ಕೆ ಹಣ ಬಿಡುಗಡೆ ಮಾಡಿ ಜೀವ ನೀಡಿದ್ದರು. ತದನಂತರ ಬಸವರಾಜ ಬೊಮ್ಮಾಯಿ ಅವರ ಆಡಳಿತಾವಧಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7ಕ್ಕೆ ಏರಿಕೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಾದಿಗ ಸಮುದಾಯದ ನೋವನ್ನು ಆಲಿಸಿ, ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ಮೂಲಕ ಸಲಿಷ್ಟರ್ ಜನರಲ್ ಮತ್ತು ಅಟಾರ್ನಿ ಜನರಲ್ ಅವರಿಂದ ಸುಪ್ರೀಂ ಕೋರ್ಟ್ ನಲ್ಲಿ ಪರವಾಗಿ ವಾದ ಮಂಡಿಸಿ ಒಳಮೀಸಲಾತಿಯ ಕಗ್ಗಂಟನ್ನು ಬಿಡಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

 

ರಾಜ್ಯ ಸರ್ಕಾರವು ಅಪೂರ್ಣಗೊಳಿಸಿರುವ ಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.   ಬಡ್ತಿ ಹುದ್ದೆಗಳಲ್ಲಿ ಹಾಗೂ 15ಕ್ಕಿಂತ ಕಡಿಮೆ ಇರುವ ಹುದ್ದೆಗಳಲ್ಲೂ ಒಳಮೀಸಲಾತಿಯನ್ನು ಕಡ್ಡಾಯವಾಗಿ ಅನ್ವಯಿಸಬೇಕು. ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡುವು ದನ್ನು ತಕ್ಷಣವೇ ತಡೆಯಬೇಕು. ಮಾದಿಗ ಸಮುದಾಯಕ್ಕೆ ಶೈಕ್ಷಣಿಕ, ಸಾಮಾಜಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಆಡಳಿತಾತ್ಮಕ ನ್ಯಾಯ ಒದಗಿಸುವುದು ಹಾಗೂ ಕಾಂಗ್ರೆಸ್ ಸರ್ಕಾರದ ಹಾದಿತಪ್ಪಿಸುವ ನೀತಿಗಳ ವಿರುದ್ಧ ಸಮುದಾಯವನ್ನು ಜಾಗೃತಗೊಳಿಸಿ, ಒಳಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಂತೆ ಆಗ್ರಹಿಸಲಾಗುವುದೆಂದು ತಿಳಿಸಿದರು.

 

ತಾ.ಪಂ.ಮಾಜಿ ಅಧ್ಯಕ್ಷ ಬಿ.ಜಯ್ಯಪ್ಪ ಮಾತನಾಡಿ,  ಸೆಪ್ಟೆಂಬರ್ 30ರಂದು ಚಿತ್ರದುರ್ಗದ ಶ್ರೀ ವಾಲ್ಮೀಕಿ ಭವನದಲ್ಲಿ ಮಧ್ಯಾಹ್ನ 11 ಗಂಟೆಗೆ "ನರೇಂದ್ರ ಮೋದಿ 25 ವರ್ಷಗಳ ಆಡಳಿತ ಸೇವಾ ಅನುಭವ ಮತ್ತು ಸೇವಾ ಸಂಕಲ್ಪ ಅಭಿಯಾನ"ದ ಆಯೋಜನಾ ಸಮಿತಿಯ ವತಿಯಿಂದ `ಮಾದಿಗ ಮುನ್ನಡೆ-2', ಮಾದಿಗ ಕಾರ್ಯಕರ್ತರ ಜಿಲ್ಲಾ ಸಮಾವೇಶ ಹಾಗೂ `ಒಳಮೀಸಲಾತಿ ಕಗ್ಗಂಟು ಬಿಡಿಸಿದ ನರೇಂದ್ರ ಮೋದಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಶಾಸಕರಾದ ಬಿ. ವೈ. ವಿಜಯೇಂದ್ರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದರಾದ ಗೋವಿಂದ ಕಾರಜೋಳ, ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ, ಜಿ. ಎಂ. ಸಿದ್ದೇಶ್ವರ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಸಾಮರಸ್ಯ ಸಂಚಾಲಕರಾದ ವಾದಿರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಸಹ ಪ್ರಭಾರಿ ಮುರಳಿ, ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಹೂಡಿ ಮಂಜುನಾಥ್, ಹನುಮಂತೇಗೌಡ, ಮಾಧುರಿ ಗೀರೀಶ್  ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

 

ನಿವೃತ್ತ ಸಹಾಯಕ ಪ್ರಾಧ್ಯಾಪಕ ಎಲ್ಲ ನಾಗರಾಜಪ್ಪ ಮಾತನಾಡಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನವಾದ ಹಿನ್ನೆಲೆಯಲ್ಲಿ ಗೌರವ ಸನ್ಮಾನ ನೆರವೇರಿಸಲಾಗುವುದು. ಜೊತೆಗೆ, ಮಾದಿಗ ಸಮುದಾಯದ ರಾಷ್ಟ್ರೀಯ ಹೋರಾಟ ಗಾರರಾದ ಮಂದಕೃಷ್ಣ ಮಾದಿಗ ಸೇರಿದಂತೆ ಸಮಾಜದ ಪ್ರಮುಖ ಗಣ್ಯರಿಗೆ ಒಳಮೀಸಲಾತಿ ಹೋರಾಟದ ಸೇವೆಗಾಗಿ ಸನ್ಮಾನಿಸಲಾಗುವುದು. ಶೋಷಿತ ಮತ್ತು ತುಳಿತಕ್ಕೊಳಗಾದ ಮಾದಿಗ ಸಮುದಾಯಕ್ಕೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ನ್ಯಾಯ ಸಿಗಬೇಕು. ಈ ಕುರಿತು ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು 5 ರಿಂದ 10 ಬಸ್ಸುಗಳ ಮೂಲಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ಶಿಸ್ತಿನಿಂದ ಆಗಮಿಸಿ ಸಮಾವೇಶವನ್ನು ಯಶಸ್ವಿ ಗೊಳಿಸಬೇಕೆಂದು ತಿಳಿಸಿದರು. 

 

ಗೋಷ್ಟಿಯಲ್ಲಿ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್, ಎಸ್.ಸಿ.ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತನ್ಕುಮಾರ್, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಪರಶುರಾಮ್, ದಯಾನಂದ, ರವಿ. ಹನುಮಂತಪ್ಪ, ತಿಪ್ಪಣ್ಣ, ಚಿಕ್ಕಣ್ಣ, ಓಬಳೇಶ್ ಕೃಷ್ಣಮೂರ್ತಿ, ಮಂಜುಳಮ್ಮ, ಲಕ್ಷ್ಮಣಪ್ಪ ಮಲ್ಲಿಕಾರ್ಜನ್ ಉಪಸ್ಥಿತರಿದ್ದರು 

 

 

 

 

 

 

  

 

 

 

 

 

 

 

 

 

 

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST