ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿ
ಒಂದು ಠಾವಿನಲ್ಲಿ ನದಿ ನಾಮವಾಯಿತ್ತು.
ನಾನಾಭಾವಂಗಳಲ್ಲಿ ನೊಂದು ಬಂದ ಜೀವ
ಒಂದು ನೆಲೆಯಲ್ಲಿ ನಿಂದು ಸಂದೇಹವ ಬಿಡಲಾಗಿಪರಮನಾಯಿತ್ತು.ಪ್ರಕಾಶವ ಕಂಡು ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು.
-ಡಕ್ಕೆಯ ಬೊಮ್ಮಣ್ಣ