LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಒನಕೆ ಓಬವ್ವ ಜಯಂತಿ ಅದ್ಧೂರಿ ಆಚರಣೆಗೆ ಸಿದ್ದತೆ: ಹೆಚ್.ಸಿ.ನಿರಂಜನಮೂರ್ತಿ

ಒನಕೆ ಓಬವ್ವ ಜಯಂತಿ ಅದ್ಧೂರಿ ಆಚರಣೆಗೆ ಸಿದ್ದತೆ: ಹೆಚ್.ಸಿ.ನಿರಂಜನಮೂರ್ತಿ

 

ಚಿತ್ರದುರ್ಗ : ನಗರದಲ್ಲಿ ನ.11 ರಂದು ನಡೆಯಲಿರುವ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ವಿಜೃಂಭಣೆಯಿಂದ ಆಚರಿಸುವ ಕುರಿತು ಛಲವಾದಿ ಮಹಾಸಭಾದಿಂದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.

ಛಲವಾದಿ ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ ಕೆಚ್ಚೆದೆಯ ಧೀರ ಮಹಿಳೆ ಒನಕೆ ಓಬವ್ವ ಶತ್ರುಗಳಿಂದ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿ ಇಂದಿಗೂ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ನಮ್ಮ ಸಮಾಜದ ಮುಖಂಡರುಗಳು ಹಳ್ಳಿಗಳಲ್ಲಿ ಸುತ್ತಾಡಿ ಛಲವಾದಿ ಸಮಾಜದವರಲ್ಲಿ ಒನಕೆ ಓಬವ್ವಳ ಕುರಿತು ಜಾಗೃತಿ ಮೂಡಿಸಿ ಕೋಟೆ ಮುಂಭಾಗದಿಂದ ಹೊರಡುವ ಜಯಂತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಮ್ಮ ಸಮಾಜದವರು ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.

ಒನಕೆ ಓಬವ್ವ ಜಯಂತಿಯಂದು ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಒದಗಿಸಬೇಕಾಗಿರುವುದರಿಂದ ಎಲ್ಲರ ಸಹಕಾರ ಮುಖ್ಯ. ಮುಂದಿನ ವರ್ಷದಿಂದ ಒಬವ್ವಳ ಜಯಂತಿಯನ್ನು ವೈಭವೋಪೇತವಾಗಿ ಆಚರಿಸೋಣ ಎಂದು ಛಲವಾದಿ ಸಮಾಜದವರಿಗೆ ಕರೆ ನೀಡಿದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಶೇಷಪ್ಪ, ಪ್ರೊ.ರಂಗಸ್ವಾಮಿ, ಭಾರ್ಗವಿ ದ್ರಾವಿಡ್, ಎಸ್.ವಿ.ಗುರುಮೂರ್ತಿ, ದಯಾನಂದ್, ಎಸ್.ಎನ್.ರವಿಕುಮಾರ್ ಕೆ.ಜಯರಾಮ್, ದೀಪಕ್, ಧರ್ಮಕಾಳೆ, ನ್ಯಾಯವಾದಿ ಹೆಚ್.ಅಣ್ಣಪ್ಪಸ್ವಾಮಿ, ಪ್ರೊ.ನಟರಾಜ್, ಶಿವಪ್ರಸಾದ್, ನವೀನ್ ದ್ರಾವಿಡ್, ರಾಮಲಿಂಗಪ್ಪ, ಪರಮೇಶ್ ಪೂಜಾರ್

ಆರ್.ಪ್ರದೀಪ್ಕುಮಾರ್, ನಾಗರಾಜ್ ಪೈಲೆಟ್, ನವೀನ್ ಮಸ್ಕಲ್, ಶಿವಸ್ವಾಮಿ ಇವರುಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರಿಕಾಳು ಮೆಣಸಿನಿಂದ ಈ ತಂತ್ರ ಮಾಡಿದರೆ ಸ್ತ್ರೀ ಪುರುಷ ವಶೀಕರಣ ವಾಗುತ್ತದೆ ಒಳ್ಳೆಯ ಉದ್ದೇಶಕ್ಕೆ ಇಷ್ಟ ಪಟ್ಟಂತ ವ್ಯಕ್ತಿಗಳಿಗಾಗಿ ಈ ತಂತ್ರ ಮಾಡಿ!ಸರ್ಕಾರಿ ನೌಕರರು 48 ಗಂಟೆಗಳಿಗೂ ಹೆಚ್ಚು ಕಾಲ ಜೈಲು ಅಥವಾ ಕಷ್ಟಡಿಲ್ಲಿ ಇದ್ರೆ ಅಮಾನತ್BDA ವತಿಯಿಂದ ನಿವೇಶನ ಪಡೆದು ಖಾಲಿ ಬಿಟ್ಟಿದ್ದರೆ ತೆರಿಗೆ ಹೆಚ್ಚಳ.!ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರಗಳ ಅಭಿವೃದ್ಧಿಗೂ ಆದ್ಯತೆ: ಸಚಿವ ಟಿ.ರಘುಮೂರ್ತಿಎಸ್‌ಸಿ/ಎಸ್‌ಟಿ ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ.ಹೊರಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರಿಗೆ ಉದ್ಯೋಗಾವಕಾಶತಾಂತ್ರಿಕ/ವಾಹನ ಚಾಲಕ ಹುದ್ದೆಗೆ ಅರ್ಜಿ ಆಹ್ವಾನಒನಕೆ ಓಬವ್ವ ಜಯಂತಿ ಅದ್ಧೂರಿ ಆಚರಣೆಗೆ ಸಿದ್ದತೆ: ಹೆಚ್.ಸಿ.ನಿರಂಜನಮೂರ್ತಿರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 'ಗುಂಡಾ ನೀತಿ ಖಂಡಸಿ ಎಸ್ಸಿ ಮೋರ್ಚಾದಿಂದ  ಪ್ರತಿಭಟನೆ-ಜಕ್ಕಣಯ್ಯ- ಅವರ ವಚನ.!