LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

'ಗೃಹಲಕ್ಷ್ಮಿ' ಯೋಜನೆ ಪಡೆಯುವ ಮಹಿಳೆಯರು ಈ ಸುದ್ದಿಯನ್ನು ಒಮ್ಮೆ ಓದಿ.!

'ಗೃಹಲಕ್ಷ್ಮಿ' ಯೋಜನೆ ಪಡೆಯುವ ಮಹಿಳೆಯರು ಈ ಸುದ್ದಿಯನ್ನು ಒಮ್ಮೆ ಓದಿ.!

 

ಬೆಂಗಳೂರು : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಯ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಇನ್ಮುಂದೆ ಮಾಸಿಕ ಎರಡು ಸಾವಿರ ರೂಪಾಯಿ ನೆರವು ಪಡೆಯಲು ಫಲಾನುಭವಿಗಳು ಕೆಲವೊಂದು ಹೊಸ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಮರುಪರಿಷ್ಕರಣೆ ಹಾಗೂ ಹಿಂದಿನ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಶೀಘ್ರದಲ್ಲೇ ಮನೆಮನೆ ಸಮೀಕ್ಷೆ ಹಾಗೂ ಸರ್ವೆ ಕಾರ್ಯ ಆರಂಭವಾಗಲಿದೆ.

ಮರುಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ವಿಶೇಷ ಆಪ್ ಹಾಗೂ ಆಫ್‌ಲೈನ್ ಅರ್ಜಿಗಳ ಮೂಲಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಎಸ್‌ಐಆರ್ ಮಾದರಿಯಲ್ಲೇ ಈ ಸಮೀಕ್ಷೆ ನಡೆಯಲಿದ್ದು, ಆಯಪ್‌ನಲ್ಲಿ ಡಿಜಿಟಲ್ ನಮೂನೆ ಭರ್ತಿಯಾದರೂ ಭೌತಿಕವಾದ ಆಫ್‌ಲೈನ್ ಮರುಪರಿಶೀಲನಾ ಅರ್ಜಿಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆ ವಿವರಗಳು, ಆಧಾರ್ ಜೋಡಣೆ ಹಾಗೂ ಪಡಿತರ ಚೀಟಿ ಸಂಖ್ಯೆಗೆ ಸಂಬಂಧಿಸಿದಂತೆ ಹೊಸ ಪ್ರಶ್ನೆಗಳನ್ನು ಈ ಅರ್ಲಿಯಲ್ಲಿ ಸೇರಿಸಲಾಗಿದೆ. ಗಣತಿದಾರರು ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ನೇರವಾಗಿ ಮನೆಗಳಿಗೆ ಭೇಟಿ ನೀಡಿ ಈ ಮಾಹಿತಿ ಸಂಗ್ರಹಿಸಲಿದ್ದಾರೆ.

 

ಅನ್ಯ ರಾಜ್ಯದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ನೆರವು ತಲುಪಿಸಲು ಹೊಸ ಅರ್ಜಿಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇದರನ್ವಯ, ಫಲಾನುಭವಿಗಳ ಬ್ಯಾಂಕ್ ಖಾತೆ ಕರ್ನಾಟಕದಲ್ಲೇ ಇರಬೇಕು (ಬೇರೆ ರಾಜ್ಯದ ಖಾತೆಗಳಿಗೆ ಅವಕಾಶವಿಲ್ಲ). ಹಾಗೆಯೇ, ಬ್ಯಾಂಕ್‌ನಲ್ಲಿ ಯಾವುದೇ ಸಾಲ ಪಡೆಯದ ವೈಯಕ್ತಿಕ ಖಾತೆ ನಂಬರ್ ಅನ್ನು ಮಾತ್ರ ನೀಡಬೇಕು ಮತ್ತು ಜಂಟಿ ಖಾತೆಗಳನ್ನು ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಈ ಹಿಂದೆ ನೀಡಲಾದ ಸಡಿಲಿಕೆಗಳನ್ನು ಸರಿಪಡಿಸಿ ಪಾರದರ್ಶಕತೆ ತರಲು ಕೆಲವು ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರ ಚೀಟಿ ಸಂಖ್ಯೆ ಒದಗಿಸುವುದು ಕಡ್ಡಾಯವಾಗಿದ್ದು, ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸದವರು ಕೂಡಲೇ ಜೋಡಣೆ ಮಾಡಿಸಿಕೊಳ್ಳಬೇಕು. ಇದರೊಂದಿಗೆ, ಫಲಾನುಭವಿಗಳು ಅಥವಾ ಅವರ ಮನೆಯವರು ಯಾವುದೇ ರೀತಿಯ ನಿವೃತ್ತಿ ಪಿಂಚಣಿ ಪಡೆಯುತ್ತಿದ್ದರೆ ಆ ಕುರಿತಾದ ಮಾಹಿತಿಯನ್ನು ಸಮೀಕ್ಷೆಯ ವೇಳೆ ಕಡ್ಡಾಯವಾಗಿ ಬಹಿರಂಗಪಡಿಸಿ ನಮೂದಿಸಬೇಕಾಗುತ್ತದೆ.

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಕ್ರೋಚ್‌ ಜನತಾ ಪಾರ್ಟಿ ನಡೆಸುವ ಪ್ರತಿಭಟನೆಗೆ ಪೊಲೀಸರ ಸರ್ಪಗಾವಲು.! ಇಂಟರ್‌ನೆಟ್‌ ಬಂದ್'ಗೃಹಲಕ್ಷ್ಮಿ' ಯೋಜನೆ ಪಡೆಯುವ ಮಹಿಳೆಯರು ಈ ಸುದ್ದಿಯನ್ನು ಒಮ್ಮೆ ಓದಿ.!ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಓದುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.!ಇಂದು 10 ರಂದು  ನಗರದ ಈ ಭಾಗಗಳಲ್ಲಿ ಕರೆಂಟ್ ಇರಲ್ಲ.!ವಚನ, ಕೀರ್ತನೆ, ತತ್ವಪದಗಳಲ್ಲಿ ಜೀವನ ಪ್ರೀತಿ ಇದೆ: ಡಾ.ಜೆ.ಕರಿಯಪ್ಪ ಮಾಳಿಗೆ .!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 10-10-2026-ನೀಲಮ್ಮ ಅವರ ವಚನ.!ಈ ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸರಳ ಶತ್ರು ನಾಶ ಉಚ್ಚಾಟನಾ ತಂತ್ರ!ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿ ಮಾಹಿತಿ ಇಲ್ಲಿದೆ.!ಚಿತ್ರದುರ್ಗ: ಮಾದಕ ವಸ್ತುಗಳಿಗೆ ದಾಸರಾದರೆಆರೋಗ್ಯ ಹಾಳು-ಎಸ್.ಬಸವರಾಜು