LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ವಚನ, ಕೀರ್ತನೆ, ತತ್ವಪದಗಳಲ್ಲಿ ಜೀವನ ಪ್ರೀತಿ ಇದೆ: ಡಾ.ಜೆ.ಕರಿಯಪ್ಪ ಮಾಳಿಗೆ .!

ವಚನ, ಕೀರ್ತನೆ, ತತ್ವಪದಗಳಲ್ಲಿ ಜೀವನ ಪ್ರೀತಿ ಇದೆ: ಡಾ.ಜೆ.ಕರಿಯಪ್ಪ ಮಾಳಿಗೆ .!

 

ಚಿತ್ರದುರ್ಗ: ವಚನ, ಕೀರ್ತನೆ ಹಾಗೂ ತತ್ವಪದಗಳಲ್ಲಿ ಜೀವನ ಪ್ರೀತಿ ಅಡಗಿದೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಜಿಲ್ಲಾ ಸಂಚಾಲಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಸ್ವಾಯತ್ತ ಕನ್ನಡ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನಕ ಸಂಸ್ಕøತಿ ಪುನಶ್ಚೇತನ ಶಿಬಿರ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಹವೇ ದೇಗುಲ, ಆತ್ಮವೇ ದೇವರು ಎಂದು ನಂಬಿದ್ದ ತತ್ವಪದಕಾರರು ವೈಚಾರಿಕ ಬೀಜ ಬಿತ್ತುವ ಮೂಲಕ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಿದರು. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ವಿದ್ಯಾರ್ಥಿಗಳು ಓದು, ಬರಹ ಹಾಗೂ ಮಾತಿನ ಶಕ್ತಿಯನ್ನು ಕಳೆದುಕೊಂಡು ವ್ಯಸನಿಗಳಾಗುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ವ್ಯಸನಮುಕ್ತರನ್ನಾಗಿ ಮಾಡುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಮಾನವೀಯತೆ, ವೈಚಾರಿಕ ಚಿಂತನೆ ಹಾಗೂ ಬುದ್ಧ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಸಾಹಿತ್ಯ ಪ್ರಕಾರಗಳಾದ ವಚನ, ಕೀರ್ತನೆ ಮತ್ತು ತತ್ವಪದಗಳು ಬರಿ ಸಾಹಿತ್ಯವಲ್ಲ, ಅವು ಸಾಮಾಜಿಕ ಮತ್ತು ಸಾಂಸ್ಕøತಿಕ ಆಂದೋಲನಗಳು. ಜನಸಾಮಾನ್ಯರ ಭಾμÉಯಲ್ಲಿ ಬದುಕಿನ ತಾತ್ವಿಕತೆ ಹಾಗೂ ಸಾಮಾಜಿಕ ಸುಧಾರಣೆಯನ್ನು ತಿಳಿಸಿದ ಜನಪರ ಚಳವಳಿಗಳಾಗಿವೆ. ಜಾತಿಸೂತಕ, ವರ್ಗಭೇದ ಮತ್ತು ಲಿಂಗ ತಾರತಮ್ಯವನ್ನು ಕಟುವಾಗಿ ವಿರೋಧಿಸಿದ ಈ ಚಳವಳಿಗಳು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿವೆ. ಇವುಗಳ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಮೂಡುತ್ತವೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೆಚ್. ಜಿ. ವಿಜಯಕುಮಾರ ಮಾತನಾಡಿ, ಶರಣರು ಭಕ್ತಿ ಮತ್ತು ಸಾಮರಸ್ಯದ ಮೂಲಕ ನಡೆಸಿದ ಆಂದೋಲನಗಳು ಜನಸಾಮಾನ್ಯರನ್ನು ಒಂದುಗೂಡಿಸಿವೆ. ಯುವಜನತೆಯನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯಲು ಈ ಆಂದೋಲನಗಳ ತಾತ್ವಿಕತೆಯನ್ನು ಎಲ್ಲರೂ ಅರ್ಥೈಸಿಕೊಳ್ಳುವುದು ಅಗತ್ಯ ಎಂದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಆರ್. ತಾರಿಣಿ ಶುಭಾದಾಯಿನಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಓದು ವ್ಯಾಖ್ಯಾನ ಹಾಗೂ ವೈಚಾರಿಕ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ 30 ವಿದ್ಯಾರ್ಥಿಗಳಿಗೆ ತಲಾ ರೂ1,000 ಹಾಗೂ ಪ್ರಬಂಧ ಸ್ಪರ್ಧೆಯಲ್ಲಿದ್ದ 15 ವಿದ್ಯಾರ್ಥಿಗಳಿಗೆ ತಲಾ ರೂ.2,000 ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಯನ ಕೇಂದ್ರದ ನಿರ್ದೇಶಕ ಸತ್ಯನಾರಾಯಣ, ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಕೆ.ಚಿತ್ತಯ್ಯ, ಸಹ ಪ್ರಾಧ್ಯಾಪಕರಾದ ಎನ್. ಜಗನ್ನಾಥ, ಕೆ. ಮಂಜುನಾಥ, ಐಕ್ಯೂಎಸಿ ಸಹ ಸಂಚಾಲಕಿ ಸೌಮ್ಯ, ಅಧೀಕ್ಷಕ ಹರಿಶಬಾಬು ರೆಡ್ಡಿ, ಕನ್ನಡ ಸ್ನಾತಕ ವಿಭಾಗದ ಮುಖ್ಯಸ್ಥೆ ಲಕ್ಷ್ಮಿ,  ಸಲ್ಮಾ ಹಾಗೂ ಸಹಾಯಕ ಪ್ರಾಧ್ಯಾಪಕ ಗಿರೀಶ ಗೌಡ ಉಪಸ್ಥಿತರಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಕ್ರೋಚ್‌ ಜನತಾ ಪಾರ್ಟಿ ನಡೆಸುವ ಪ್ರತಿಭಟನೆಗೆ ಪೊಲೀಸರ ಸರ್ಪಗಾವಲು.! ಇಂಟರ್‌ನೆಟ್‌ ಬಂದ್'ಗೃಹಲಕ್ಷ್ಮಿ' ಯೋಜನೆ ಪಡೆಯುವ ಮಹಿಳೆಯರು ಈ ಸುದ್ದಿಯನ್ನು ಒಮ್ಮೆ ಓದಿ.!ರಾಜ್ಯದ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿನ ಓದುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸಿಹಿ ಸುದ್ದಿ.!ಇಂದು 10 ರಂದು  ನಗರದ ಈ ಭಾಗಗಳಲ್ಲಿ ಕರೆಂಟ್ ಇರಲ್ಲ.!ವಚನ, ಕೀರ್ತನೆ, ತತ್ವಪದಗಳಲ್ಲಿ ಜೀವನ ಪ್ರೀತಿ ಇದೆ: ಡಾ.ಜೆ.ಕರಿಯಪ್ಪ ಮಾಳಿಗೆ .!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 10-10-2026-ನೀಲಮ್ಮ ಅವರ ವಚನ.!ಈ ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸರಳ ಶತ್ರು ನಾಶ ಉಚ್ಚಾಟನಾ ತಂತ್ರ!ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿ ಮಾಹಿತಿ ಇಲ್ಲಿದೆ.!ಚಿತ್ರದುರ್ಗ: ಮಾದಕ ವಸ್ತುಗಳಿಗೆ ದಾಸರಾದರೆಆರೋಗ್ಯ ಹಾಳು-ಎಸ್.ಬಸವರಾಜು