LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆ: ಹರಿಶ್ಚಂದ್ರ ದ್ವಿವೇದಿ ಹೇಳಿದ್ದು ಹೀಗೆ.!

ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆ: ಹರಿಶ್ಚಂದ್ರ ದ್ವಿವೇದಿ ಹೇಳಿದ್ದು ಹೀಗೆ.!

ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆ: ಹರಿಶ್ಚಂದ್ರ ದ್ವಿವೇದಿ ಹೇಳಿದ್ದು ಹೀಗೆ.!

ಚಿತ್ರದುರ್ಗ : ಕೇಂದ್ರ ಚುನಾವಣಾ ಆಯೋಗ, ಇವಿಎಂ. ಮೇಲೆ ಅಪ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ಗೆ ದೇಶದ ಹಿತ ಬೇಕಿಲ್ಲ. ಅದಕ್ಕಾಗಿ ಜನತೆಯಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಉಸ್ತುವಾರಿ ಹರಿಶ್ಚಂದ್ರ ದ್ವಿವೇದಿ ಹೇಳಿದರು.

ಚಂದ್ರವಳ್ಳಿ ಕ್ರಾಸ್ನಲ್ಲಿ ಬುಧವಾರ ಬಿಜೆಪಿ. ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದರು.

ರಾಹುಲ್ಗಾಂಧಿ ಸಂವಿಧಾನ ಹಿಡಿದುಕೊಂಡು ತಿರುಗಾಡುತ್ತಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕ ಹಾಗೂ ರಾಮ ಮಂದಿರ ನಿರ್ಮಾಣ ಮಾಡಿರುವುದು ಕಾಂಗ್ರೆಸ್ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮಹಾ ಪುರುಷರಿಗೆ ಅವಮಾನ ಮಾಡುತ್ತಿದೆ. ರಾಹುಲ್ಗಾಂಧಿಗೆ ಸುಪ್ರೀಂಕೋರ್ಟ್ ಮೇಲೆ ನಂಬಿಕೆಯಿಲ್ಲ. ಎಂಎಲ್ಸಿ. ಚುನಾವಣೆಯಲ್ಲಿ ರಾಜ್ಯದಲ್ಲಿ ನಾಲ್ಕಕ್ಕೆ ನಾಲ್ಕು ಸ್ಥಾನಗಳಲ್ಲಿ ಎನ್ಡಿಎ. ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಪ್ರಜ್ಞಾವಂತ ಪದವೀಧರ ಮತದಾರರು ಗೆಲ್ಲಿಸಿದ್ದಾರೆ. 2028 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ.ಯನ್ನು ಅಧಿಕಾರಕ್ಕೆ ತರಬೇಕಿದೆ. 2029 ರ ಚುನಾವಣೆಯಲ್ಲಿಯೂ ಮೋದಿ ಮತ್ತೆ ದೇಶದ ಪ್ರಧಾನಿಯಾಗುವುದು ಖಚಿತ. ಕಾರ್ಯಕರ್ತರು, ಮುಖಂಡರುಗಳು ಈಗಿನಿಂದಲೇ ಚುನಾವಣೆಗೆ ಸಿದ್ದರಾಗಿ ಎಂದು ಹರಿಶ್ಚಂದ್ರ ದ್ವಿವೇದಿ ಕರೆ ನೀಡಿದರು.

ಪಾಕಿಸ್ತಾನದ ಮೇಲೆ ನಮ್ಮ ದೇಶ ಯುದ್ದ ಮಾಡಿದರೆ ರಾಹುಲ್ಗಾಂಧಿಗೆ ಹೊಟ್ಟೆಯುರಿ. ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ರಾಜ್ಯದ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು.

ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಮನುಷ್ಯತ್ವವಿಲ್ಲದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಲು, ಮೊಸರಿನ ಬೆಲೆಯನ್ನು ಏರಿಸಿ ರಾಜ್ಯದ ಬಡವರ ಮೇಲೆ ಬರೆ ಎಳೆದಿದ್ದಾರೆ. ಶೇ.30 ರಿಂದ 40 ರಷ್ಟು ಬಸ್ ಪ್ರಯಾಣ ದರ ಏರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ಗೆ ಕಪಾಳ ಮೋಕ್ಷ ಮಾಡಿದೆ. ಮುಂಬರುವ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಿದರೆ ಮಾತ್ರ ಜನ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಕಾಂಗ್ರೆಸ್ನ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ಕೋಲಾರದಿಂದ ಆರಂಭಗೊಂಡ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆ ಚಿತ್ರದುರ್ಗಕ್ಕೆ ಆಗಮಿಸಿದೆ. ರೈತರು, ಬಡವರು, ಹಿಂದೂ, ಯುವಕರು, ಮಹಿಳಾ ವಿರೋಧಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೊದಲು ಕಬ್ಬು ಬೆಳೆಗಾರರಿಗೆ ಒಂದು ಸಾವಿರ ರೂ. ಧನ ಸಹಾಯ ನೀಡಲಿ. ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಆಲಿಸಲು ಹೋದ ಮುಖ್ಯಮಂತ್ರಿ ಖಾಲಿ ಜೇಬು ತೋರಿಸಿ ಹಿಂದಿರುಗಿವುದನ್ನು ನೋಡಿದರೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕೂಡಲೆ ರೈತರ ರಕ್ಷಣೆಗೆ ಬರಬೇಕು. ಜನ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ಗುರುವಾರ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.

ಭಾರತವನ್ನು ವಿಶ್ವಗುರುವನ್ನಾಗಿಸಲು ಪಣ ತೊಟ್ಟಿರುವ ಮೋದಿಯ ಪಾರದರ್ಶಕತೆ ನೋಡಿ ರಾಹುಲ್ಗಾಂಧಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಭಯೋತ್ಪಾದನೆ, ನಕ್ಸಲ್ ನಿರ್ಮೂಲನೆಯಾಗಿದೆ. 2028 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ. ಅಧಿಕಾರಕ್ಕೆ ತರಬೇಕಾಗಿರುವುದರಿಂದ ಜನರಲ್ಲಿ ಜಾಗೃತಿ ಮೂಡಿಸುವುದು ಪಾದಯಾತ್ರೆ ಉದ್ದೇಶ ಎಂದರು.

ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡುತ್ತ ದೇಶದಲ್ಲಿ ಹನ್ನೆರಡು ಬಾರಿ ಎಸ್.ಐ.ಆರ್.ನಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹತ್ತು ಸಾರಿ ಎಸ್.ಐ.ಆರ್. ಆಗಿದೆ. ಆಗ ಇಲ್ಲದ ವಿರೋಧ ಈಗ ಏಕೆ? ಚುನಾವಣಾ ಆಯೋಗದ ಮೇಲೆ ಆಗ ಬಿಜೆಪಿ. ಜನರಲ್ಲಿ ಅಪ ನಂಬಿಕೆ ಹುಟ್ಟಿಸಲಿಲ್ಲ. ನಮ್ಮ ಕಡುವೈರಿ ದೇಶಗಳ ಜೊತೆ ಸೇರಿಕೊಂಡು ರಾಹುಲ್ಗಾಂಧಿ ದೇಶದ ದ್ರೋಹದ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ. ನ್ಯಾಯಾಂಗ, ನೀಟ್ ಪರೀಕ್ಷೆ ಬಗ್ಗೆ ಅಪ ಪ್ರಚಾರ ಮಾಡುತ್ತ ಯುವಕರನ್ನು ದಿಕ್ಕು ತಪ್ಪಿಸುತ್ತಿರುವುದರ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದೆಂದು ನುಡಿದರು.

2028 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ. ಅಧಿಕಾರಕ್ಕೆ ಬರಲಿದೆ. ಎನ್ಡಿಎ. ಭಯದಿಂದ ಸ್ಟಿಂಗ್ ಆಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ತಲೆ ದೋರಿರುವ ಬರದ ಕಡೆ ಗಮನ ಕೊಡದ ಡಿಕೆಶಿ. ಹಿರಿಯೂರಿಗೆ ಬಂದು ಜನತೆಯನ್ನು ವಂಚಿಸಿದ್ದಾರೆ. ಬೆಳಗಾವಿಯಲ್ಲಿ ಕಬ್ಬು ಬೆಳೆಯುವ ರೈತರಿಗೆ ಪರಿಹಾರ ನೀಡದೆ ಕೈಮುಗಿದು ಫಲಾಯನಗೊಂಡಿರುವ ಅನಿಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ ಸಂವಿಧಾನವನ್ನು ಬಗಲಲ್ಲಿ ಹಿಡಿದುಕೊಂಡು ಸುತ್ತಾಡುತ್ತಿರುವ ಕಾಂಗ್ರೆಸ್ನಿಂದ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯಾಗಿರುವುದರಿಂದ ಸಂವಿಧಾನ ಉಳಿಸಬೇಕಿದೆ. 1975, ಜೂ. 25 ರಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿ ದೇಶದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದರು ಅದೇ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಆಗ ಅನೇಕರು ಜೈಲಿಗೆ ಹೋದರು. 21 ದಿನಗಳ ಕಾಲ ದೇಶ ಕತ್ತಲಲ್ಲಿತ್ತು. 75 ಬಾರಿ ಇದುವರೆವಿಗೂ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಸಂವಿಧಾನದ ಮೇಲೆ ಹಲ್ಲೆ ನಡೆಸುತ್ತಿರುವ ಕಾಂಗ್ರೆಸ್ಗೆ ಎಸ್ಐಆರ್.ವಿರುದ್ದ ಹೋರಾಡುವ ನೈತಿಕತೆಯಿಲ್ಲ ಎಂದು ಕಿಡಿ ಕಾರಿದರು.

ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡುತ್ತ ಮರಣ ಹೊಂದಿದವರು, ಎರಡು ಮೂರು ಕಡೆ ಮತಪಟ್ಟಿಯಲ್ಲಿ ಹೆಸರಿರುವವರನ್ನು ಗುರುತಿಸಿ ಡಿಲಿಟ್ ಮಾಡುವುದು ಎಸ್ಐಆರ್. ಉದ್ದೇಶ. ದೇಶದ ಪ್ರಧಾನಿ ಮೋದಿರವರ ಮೇಲೆ ಜನತೆಯಲ್ಲಿ ಸಂಶಯ ಮೂಡಿಸಿ ಅರಾಜಕತೆ ಉಂಟು ಮಾಡುತ್ತಿರುವ ರಾಹುಲ್ಗಾಂಧಿಯ ಮುಖವಾಡ ಕಳಚಿ ಜನತೆಯನ್ನು ಎಚ್ಚರಿಸಲು ರಾಜ್ಯದಲ್ಲಿ ಪಾದಯಾತ್ರೆ ಆರಂಭಗೊಂಡಿದೆ. 2028 ರಲ್ಲಿ ರಾಜ್ಯದಲ್ಲಿ ಬಿಜೆಪಿ.ಯನ್ನು ಅಧಿಕಾರಕ್ಕೆ ತಂದು ಕಾಂಗ್ರೆಸ್ಗೆ ತಕ್ಕ ಪಾಠ

ಕಲಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಬಿಜೆಪಿ. ಜಿಲ್ಲಾಧ್ಯಕ್ಷ ಬಿ.ಟಿ.ಕುಮಾರಸ್ವಾಮಿ, ಮಾಜಿ ಸಚಿವ ರೇಣುಕಾಚಾರ್ಯ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ ಇವರುಗಳು ಮಾತನಾಡಿದರು.

ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ತಿಪ್ಪೇಸ್ವಾಮಿ, ವಿಧಾನಪರಿಷತ್ ಸದಸ್ಯರುಗಳಾದ ಕೆ.ಎಸ್.ನವೀನ್, ಕೆ.ಎಂ.ಸುರೇಶ್, ಚಿದಾನಂದಗೌಡ

ದಾವಣಗೆರೆ ಬಿಜೆಪಿ.ಜಿಲ್ಲಾಧ್ಯಕ್ಷ ನಾಗರಾಜ್, ಎಸ್.ವಿ.ರಾಮಚಂದ್ರಪ್ಪ, ಬಸವರಾಜ್ನಾಯ್ಕ, ಜ್ಯೋತಿಗಣೇಶ್, ಮಾಡಾಳ್ ಮಲ್ಲಿಕಾರ್ಜುನ್, ಬಿ.ಸುರೇಶ್ಗೌಡ, ರವಿಕುಮಾರ್, ಲಿಂಗಮೂರ್ತಿ, ರಾಜಣ್ಣ, ಲಕ್ಷ್ಮಿಕಾಂತ, ಅನಿಲ್ ಜಿಲ್ಲಾ ಬಿಜೆಪಿ. ನಿಕಟಪೂರ್ವ ಅಧ್ಯಕ್ಷ ಎ.ಮುರಳಿ, ಎಲ್.ಸಿ.ನಾಗರಾಜ್, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ

ಜಿ.ಹೆಚ್.ಮೋಹನ್, ವೆಂಕಟೇಶ್ಯಾದವ್, ಮಾಧುರಿ ಗಿರೀಶ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ನೆತ್ತಿಸುಡುವ ಬಿಸಿಲಿನಲ್ಲಿಯೇ ಹೊರಟ ಪಾದಯಾತ್ರೆಯಲ್ಲಿ ಬಿಜೆಪಿ.ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ರೇಖ, ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ನಂದಿ ನಾಗರಾಜ್, ರತ್ನಮ್ಮ, ಬಸಮ್ಮ, ಶ್ಯಾಮಲ ಶಿವಪ್ರಕಾಶ್, ರೂಪವಿನಯ್ಕುಮಾರ್ ಸೇರಿದಂತೆ ತುಮಕೂರು, ಮಧುಗಿರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಜ್ಞಾನಭಾರತಿ ಶಾಲೆಯ ಮುಂಭಾಗದಿಂದ ಹೊರಟ ಪಾದಯಾತ್ರೆ ಕನಕವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಗಾಂಧಿ ಸರ್ಕಲ್, ಎಸ್.ಬಿ.ಎಂ.ವೃತ್ತದ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿ ಅಂತ್ಯಗೊಳಿಸಿತು.       

 

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಷ್ಟಪಟ್ಟಂತ ಸ್ತ್ರೀ ಪತ್ನಿಯಾಗಿ ಸಿಗಬೇಕೆಂದರೆ ಏಲಕ್ಕಿಯಿಂದ ಈ ತಂತ್ರ ಮಾಡಿ ಸಾಕು!ವಿದ್ಯಾರ್ಥಿವೇತನಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ.!ದೀಪಾವಳಿ ಹಬ್ಬದ ಗಿಫ್ಟ್: ಜಿಲ್ಲೆಯ ಗೃಹಲಕ್ಷ್ಮಿಯರಿಗೆ 3 ಕಂತಿನ ಹಣ ಬಿಡುಗಡೆ..!ಸರಕಾರಿ ನೌಕರರಿಗೆ ಗುಡ್ ನ್ಯೂಸ್ ..!ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರದ ಅನುಮೋದನೆ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 05-11-2026ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಪಾದಯಾತ್ರೆ: ಹರಿಶ್ಚಂದ್ರ ದ್ವಿವೇದಿ ಹೇಳಿದ್ದು ಹೀಗೆ.!ವಚನ: --ಏಲೇಶ್ವರ ಕೇತಯ್ಯಅಗ್ನಿವೀರರ ಸೇವಾವಧಿ ವಿಸ್ತರಣೆ..! ಕೇಂದ್ರ ಸರ್ಕಾರ ಆದೇಶ..!ಕ್ರಿಕೆಟ್ : ಭಾರತಕ್ಕೆ ಭರ್ಜರಿ ಗೆಲುವು..!ನಿಮ್ಮ ಏಳಿಗೆ ಪ್ರಗತಿ ಸಹಿಸದ ಶತ್ರುಗಳಿಗೆ ಅಷ್ಟಮಂಡಲ ಹಾಕುವ ಕಪ್ಪು ಕವಡೆಗಳಿಂದ ಶತ್ರುನಾಶ ಸರಳ ತಂತ್ರ ಮಾಡಬಹುದು!