ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ECI) ಪ್ರಕಟಿಸಿದೆ.
ಅಧಿಸೂಚನೆ ಪ್ರಕಟಣೆ: ಸೆಪ್ಟೆಂಬರ್ 29, 2026 (ಮಂಗಳವಾರ)
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 06, 2026 (ಮಂಗಳವಾರ)
ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 07, 2026 (ಬುಧವಾರ)
ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನಾಂಕ: ಅಕ್ಟೋಬರ್ 09, 2026 (ಶುಕ್ರವಾರ)
ಮತದಾನದ ದಿನಾಂಕ: ಅಕ್ಟೋಬರ್ 23, 2026 (ಶುಕ್ರವಾರ)
ಮತದಾನದ ಸಮಯ: ಬೆಳಗ್ಗೆ 08:00 ರಿಂದ ಸಂಜೆ 04:00 ರವರೆಗೆ
ಮತಗಳ ಎಣಿಕೆ ಹಾಗೂ ಫಲಿತಾಂಶ: ಅಕ್ಟೋಬರ್ 27, 2026 (ಮಂಗಳವಾರ)
ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ: ಅಕ್ಟೋಬರ್ 31, 2026 (ಶನಿವಾರ)
ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ:
ಚುನಾವಣೆ ಘೋಷಣೆಯಾಗಿರುವ ಕರ್ನಾಟಕದ ಆಯಾ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯು (Model Code of Conduct) ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದಾರೆ.