LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಯುವಕರು ಜನಪರ ಕಾಳಜಿ ಮೈಗೂಡಿಸಿಕೊಳ್ಳಬೇಕು- ಜಿ.ಪಂ. ಸಿಇಒ ಡಾ.ಆಕಾಶ್.ಎಸ್

ಯುವಕರು ಜನಪರ ಕಾಳಜಿ ಮೈಗೂಡಿಸಿಕೊಳ್ಳಬೇಕು- ಜಿ.ಪಂ. ಸಿಇಒ ಡಾ.ಆಕಾಶ್.ಎಸ್

 

ಚಿತ್ರದುರ್ಗ: ಇಂದಿನ ಯುವಕರು ನಾಳಿನ ದೇಶದ ಪ್ರಜೆಗಳು ಮತ್ತು ನಾಯಕರು, ಹಾಗಾಗಿ ಯುವಕರು ಜನಪ್ರತಿನಿಧಿಗಳಾಗಲು ಇಂದಿನಿAದಲೇ ಜನಪರ ಕಾಳಜಿ, ಬದ್ಧತೆ ಮತ್ತು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿ.ಪಂ.ಸಿಇಒ ಡಾ.ಆಕಾಶ್.ಎಸ್ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸರಸ್ವತಿ ಕಾನೂನು ಮಹಾವಿದ್ಯಾಲಯ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ, ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂವಿಧಾನದ ಪೀಠಿಕೆಯಲ್ಲಿ ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ‍್ಯವನ್ನು ದೇಶ ಎಲ್ಲಾ ಪ್ರಜೆಗಳಿಗೂ ನೀಡಲಾಗಿದೆ. ಸರ್ಕಾರಗಳ ಯಾವುದೇ ನೀತಿ ಅಥವಾ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ತೀವ್ರ ಸ್ವರೂಪದ ಅನ್ಯಾಯ ಉಂಟಾದಾಗ, ಶಾಂತಿಯುತವಾಗಿ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ ಸೆಳೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಯುವ ಜನರು ತಾವು ಪ್ರತಿಪಾದಿಸುವ ಅಥವಾ ಬೆಂಬಲಿಸುವ ವಿಚಾರವು ಸಾರ್ವಜನಿಕ ಹಾಗೂ ರಾಷ್ಟಿçÃಯ ಹಿತಾಸಕ್ತಿ ಪೂರಕವಾಗಿದೆಯೇ ಎಂಬುದನ್ನು ಸ್ವತಃ ಪರಿಶೀಲಿಸಬೇಕು. ಸಂಸದೀಯ ಕಾರ್ಯಕಲಾಪಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ಪ್ರಮುಖವಾದುದು. ಯುವ ಸಂಸತ್‌ನಲ್ಲಿ ಚರ್ಚೆಗಳು ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆ ಹಾಗೂ ಕಾರ್ಯಕಾಲಪಗಳನ್ನು ನೆಡಯಲು ದಿಕ್ಸೂಚಿಯನ್ನು ತೋರವಂತೆ ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆ ಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಯುವ ಸಂಸತ್‌ನಲ್ಲಿ ಭಾಗವಹಿಸಿದ ಹಾಗೂ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ವಕೀಲರ ಸಂಘದ ಅಧ್ಯಕ್ಷ ಮಹೇಶ್ವರಪ್ಪ, ಸರಸ್ವತಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಎಂ.ಎಸ್.ಸುಧಾದೇವಿ, ಸಹಾಯಕ ನಿರ್ದೇಶಕ ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಕ್ಟೋಬರ್ 15 ರಿಂದ ಹಿಂಗಾರು ಮಾರುತಗಳು ಪ್ರವೇಶ: ರಾಜ್ಯದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ.!ರಾಜ್ಯದ ನೂತನ ರಾಜ್ಯಪಾಲೆಯಾಗಿ ಡಾ. ಸುಧಾ ಯಾದವ್.!ಚಿತ್ರದುರ್ಗ : ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಪ್ರಾರಂಭ.! ಬೆಲೆ ಇಷ್ಟು.!ಯುವಕರು ಜನಪರ ಕಾಳಜಿ ಮೈಗೂಡಿಸಿಕೊಳ್ಳಬೇಕು- ಜಿ.ಪಂ. ಸಿಇಒ ಡಾ.ಆಕಾಶ್.ಎಸ್ಈ ಹೂವಿನಿಂದ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಮಾಡಿ ಸಂಕಲ್ಪ ಮಾಡಿಕೊಂಡರೆ ಕಷ್ಟಗಳೆಲ್ಲ ಪರಿಹಾರವಾಗಿ ಇಷ್ಟಾರ್ಥ ಸಿದ್ಧಿಯಾಗುತ್ತದೆ!ಈ ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ: 37 ಕ್ಷೇತ್ರದ ಮೀಸಲಾತಿ ಪಟ್ಟಿ ವಿವರ ಇಲ್ಲಿದೆ.!ಗಂಡ ಪರ ಸ್ತ್ರಿಯ ಸಹವಾಸದಲ್ಲಿ ಇದ್ದು ಅಕ್ರಮ ಅನೈತಿಕ ಸಂಬಂಧಗಳಿಂದ ನಿಮ್ಮ ಜೀವನ ಹಾಳಾಗುತ್ತಿದ್ದರೆ ಈ ಸರಳ ಪ್ರಯೋಗಗಳನ್ನು ಪಾಲನೆ ಮಾಡಿ!ಗವಿಸಿದ್ಧೇಶ್ವರ ಸ್ವಾಮೀಜಿ ಹನ್ನೊಂದು ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ..!ಕಣಿವೆಮಾರಮ್ಮನಿಗೆ ದಸರಾ ನವರಾತ್ರಿಯ ಮೊದಲನೆ ಅಲಂಕಾರ.!