ದಾವಣಗೆರೆ : ಪ್ರಸಕ್ತ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಜಗಳೂರು ತಾಲೂಕಿನ ಅಡಿಕೆ, ದಾಳಿಂಬೆ ಬೆಳೆಗಳು ಹವಾಮಾನ ವೈಪರೀತ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಈ ಬೆಳೆಗಳಿಗೆ ತಾಲ್ಲೂಕಿನ ರೈತರಿಗೆ ವಿಮೆ ಮೂಲಕ ಪರಿಹಾರ ಪಡೆಯಬಹುದು.
ರೈತರು ತೋಟಗಾರಿಕೆ ಬೆಳೆಗಳಾದ ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ ರೂ.1,28,000 ವಿಮಾ ಮೊತ್ತಕ್ಕೆ 6400.ರೂ ಪ್ರೀಮಿಯಮ್ ಹಾಗೂ ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್ ಗೆ ರೂ.1,27,000 ವಿಮಾ ಮೊತ್ತಕ್ಕೆ 6350.ರೂ ಪ್ರೀಮಿಯಮ್ ಪಾವತಿಸಬೇಕಾಗಿರುತ್ತದೆ. ವಿಮೆ ಮೊತ್ತ ಪಾವತಿಸಲು ಜೂನ್ 30 ಕೊನೆಯ ದಿನವಾಗಿದ್ದು, ಹೆಚ್.ಡಿ.ಎಫ್.ಸಿ ಎರ್ಗೋ ಕಂಪನಿಯನ್ನು ವಿಮಾ ಸಂಸ್ಥೆಯನ್ನಾಗಿ ನಿಗಧಿಪಡಿಸಲಾಗಿದೆ.
ಅಗತ್ಯ ದಾಖಲಾತಿಗಳಾದ ಪ್ರಸಕ್ತ ಸಾಲಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ಸಹಾಯಕ ತೋಟಗಾರಿಕೆ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದವರನ್ನು ಸಂಪರ್ಕಿಸಬಹುದು. ಎಂ.ವಿ.ವಸಂತಕುಮಾರ ರೈತ ಸಂಪರ್ಕ ಕೇಂದ್ರ ಕಸಬ ಹೋಬಳಿ ಮೊ.ಸಂಖ್ಯೆ: 7892366326, ಗಜೇಂದ್ರ.ಎಸ್.ಕೆ, ರೈತ ಸಂಪರ್ಕ ಕೇಂದ್ರ ಬಿಳಿಚೋಡು ಹೋಬಳಿ, ಮೊ.ಸಂಖ್ಯೆ: 8861239224 ಮತ್ತು ಸುನೀಲ್ ಕುಮಾರ್.ಹೆಚ್.ಟಿ ರೈತ ಸಂಪರ್ಕ ಕೇಂದ್ರ ಸೊಕ್ತ ಮೊಸಂಖ್ಯೆ: 7899942287 ಯನ್ನು ಸಂಪರ್ಕಿಸಬಹುದು. ಈ ಕೂಡಲೇ ತಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಸೇವಾ ಕೇಂದ್ರಗಳಲ್ಲಿ, ವಿಮೆಯ ಪ್ರಿಮಿಯಮ್ ಪಾವತಿಸಿ ವಿಮೆದಾರರಾಗಬಹುದು. ಎಂದು ಜಗಳೂರಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
(AI ಚಿತ್ರ)































